ದೇಗುಲಗಳ ಹುಂಡಿ ದೋಚುತ್ತಿದ್ದ ಖದೀಮರು ಅಂದರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.14- ವಿವಿಧ ದೇವಾಲಯಗಳ ಬಾಗಿಲು ಒಡೆದು ಹುಂಡಿಗಳನ್ನು ದೋಚುತ್ತಿದ್ದ ಆರು ಮಂದಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿ 9.50 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಮೈಸೂರು ಮೂಲದ ಕಬ್ಬಾಳು (26), ಕುಮಾರ (26), ಮಂಜ (27), ವಿಜಯ್‍ಕುಮಾರ್ (25), ಬಸವ (37) ಮತ್ತು ಪಿಚ್ಚಗುನ್ನ (25) ಬಂಧಿತ ಆರೋಪಿಗಳಾಗಿದ್ದು, ಇವರಿಂದ 3 ಲಕ್ಷ ಬೆಲೆಬಾಳುವ ಚಿನ್ನಾಭರಣ, 4.50 ಲಕ್ಷ ರೂ. ನಗದು, 3 ಬೈಕ್, ಆಟೋ ವಶಪಡಿಸಿಕೊಂಡಿದ್ದಾರೆ.

ರಾತ್ರಿ ವೇಳೆಯಲ್ಲಿ ದೇವಾಲಯಗಳ ಬಾಗಿಲು ಒಡೆದು ಕಳ್ಳತನ ಮಾಡುತ್ತಿದ್ದ ಬಗ್ಗೆ ಅಮೃತಹಳ್ಳಿ ಪೊಲೀಸರು ತನಿಖೆ ಕೈಗೊಂಡು ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳ ಬಂಧನದಿಂದ 10 ಪ್ರಕರಣಗಳು ಬೆಳಕಿಗೆ ಬಂದಿದ್ದು,

ಅಮೃತಹಳ್ಳಿ, ಚಿತ್ರದುರ್ಗ, ಮಹದೇವಪುರ ವ್ಯಾಪ್ತಿಯ ತಲಾ ಒಂದು ಪ್ರಕರಣ, ದೇವನಹಳ್ಳಿ ಮೂರು, ಚಿಕ್ಕಮಗಳೂರು ಜಿಲ್ಲೆಯ ಎರಡು ಹಾಗೂ ದಾವಣಗೆರೆ ಜಿಲ್ಲೆಯ ಎರಡು ದೇವಾಲಯ ಕಳವು ಪ್ರಕರಣಗಳು ಪತ್ತೆಯಾಗಿವೆ.

Facebook Comments

Sri Raghav

Admin