ಅರುಣಾಚಲ ಪ್ರದೇಶದಲ್ಲಿ 6 ಪ್ರತ್ಯೇಕತಾವಾದಿಗಳ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.11- ಅರುಣಾಚಲ ಪ್ರದೇಶದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಆರು ಪ್ರತ್ಯೇಕತಾವಾದಿಗಳನ್ನು ಸೇನೆ ಹೊಡೆದುರುಳಿಸಿತ್ತು. ಘಟನೆಯಲ್ಲಿ ಯೋಧನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ.

ಅರುಣಾಚಲ ಪ್ರದೇಶದ ಕೋನ್ಸಾ ಪ್ರದೇಶದಲ್ಲಿ ಅಸ್ಸೋಂ ರೈಫಲ್ಸ್ ಪಡೆಯ ಯೋಧರು ಆರು ಪ್ರತ್ಯೇಕತಾವಾದಿಗಳನ್ನು ಹೊಡೆದುರುಳಿಸಿದ್ದು, ಹತ್ಯೆಯಾದವರನ್ನು ಎನ್‍ಎಸ್‍ಸಿಎನ್(ಐಎಂ) ಉಗ್ರರು ಎಂದು ಗುರುತಿಸಲಾಗಿದೆ.

ಎನ್‍ಕೌಂಟರ್‍ನಲ್ಲಿ ಯೋಧನೊಬ್ಬ ಗಾಯಗೊಂಡಿದ್ದು, ಆತನನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಹತ್ಯೆಯಾದ ಪ್ರತ್ಯೇಕತಾವಾದಿಗಳ ಬಳಿ ಇದ್ದ ಆರು ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಸ್ಸೋಂ ರೈಫಲ್ ಪಡೆಯ ಮೂಲಗಳು ತಿಳಿಸಿವೆ.

Facebook Comments

Sri Raghav

Admin