ಮಧ್ಯಪ್ರದೇಶದಲ್ಲಿ ಸುಣ್ಣದಕಲ್ಲು ಗಣಿ ಕುಸಿದು 6 ಮಂದಿ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಶಹದೋಲ್, ಜೂ.14- ದೇಶದ ಕೆಲವು ರಾಜ್ಯಗಳಲ್ಲಿ ಗಣಿ ದುರಂತಗಳು ಮುಂದುವರೆದಿರುವಾಗಲೇ ಮಧ್ಯಪ್ರದೇಶ ಶಹದೋಲ್ ಜಿಲ್ಲೆಯಲ್ಲಿ ಲೈಮ್‍ಸ್ಟೋನ್ ಕ್ವಾರಿ (ಸುಣ್ಣದ ಕಲ್ಲು ಗಣಿ) ಕುಸಿದು ಆರು ಮಂದಿ ಮೃತಪಟ್ಟು ಕೆಲವರು ತೀವ್ರ ಗಾಯಗೊಂಡಿದ್ದಾರೆ.

ಈ ದುರ್ಘಟನೆಯಲ್ಲಿ 10 ಮಂದಿ ಪಾರಾಗಿದ್ದಾರೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ.

ಶಹದೋಲ್ ಜಿಲ್ಲೆಯ ಬಿಯೋಹರಿ ಪ್ರದೇಶದ ಪಸ್ಗರಿ ಎಂಬಲ್ಲಿ ಸುಣ್ಣದ ಕಲ್ಲಿನ ಗಣಿ ಕುಸಿದು ಇಬ್ಬರು ಮಹಿಳೆಯರು ಮತ್ತು ಬಾಲಕನೊಬ್ಬ ಸೇರಿದಂತೆ ಆರು ಮಂದಿ ಮೃತಪಟ್ಟರು.

ಈ ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಇತರ 10 ಮಂದಿ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ ಎಂದು ಉನ್ನತ ಪೆÇಲೀಸ್ ಅಕಾರಿಯೊಬ್ಬರು ತಿಳಿಸಿದ್ದಾರೆ. ಈ ದುರ್ಘಟನೆ ನಂತರ ಗಣಿ ಪ್ರದೇಶವನ್ನು ಬಂದ್ ಮಾಡಲಾಗಿದೆ.

ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ಮೃತರ ಕುಟುಂಬಗಳಿಗೆ ಸಂಬಲ್ ಯೋಜನೆ ಅಡಿ ತಲಾ 4 ಲಕ್ಷ ರೂ.ಗಳ ಪರಿಹಾರ ಮತ್ತು ಅಂತ್ಯಕ್ರಿಯೆಗಾಗಿ ತಲಾ 10,000 ರೂ.ಗಳನ್ನು ನೀಡಲಾಗುವುದು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಪ್ರತಿಮಾ ಮ್ಯಾಥ್ಯು ತಿಳಿಸಿದ್ದಾರೆ.

Facebook Comments

Sri Raghav

Admin