ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

ವಿಜಯಪುರ, ಅ.20- ಮನೆಯಲ್ಲಿ ಮಲಗಿದ್ದ ವೇಳೆ ಹೆಗ್ಗಣ ಕಚ್ಚಿ ಆರು ತಿಂಗಳ ಗಂಡುಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಸಿಂಧಗಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ. ಗೀತಾ ಹಾಗೂ ಗೋಲಪ್ಪ ದಂಪತಿಯ ಆರು ತಿಂಗಳ ಗಂಡುಮಗು ಹೆಗ್ಗಣ ಕಚ್ಚಿ ಮೃತಪಟ್ಟಿದೆ.

ರಾತ್ರಿ ಮಲಗಿದ್ದ ವೇಳೆ ಮಗುವಿನ ಬಲಗಾಲಿಗೆ ಹೆಗ್ಗಣ ಬಲವಾಗಿ ಕಚ್ಚಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಪೋಷಕರು ನಿದ್ದೆಯಲ್ಲಿದ್ದ ಕಾರಣ ಮಗುವಿಗೆ ಹೆಗ್ಗಣ ಕಚ್ಚಿದ್ದು ಅವರ ಅರಿವಿಗೆ ಬರಲಿಲ್ಲ.

ಹೆಗ್ಗಣದ ದಾಳಿಯಿಂದ ಮಗು ಬೋರಲು ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಎಚ್ಚರಗೊಂಡ ಪೋಷಕರು ನೋಡಿ ಕಂಗಾಲಾಗಿದ್ದಾರೆ.  ಪತಿ ಹಾಗೂ ಮಗುವಿನೊಂದಿಗೆ ತವರಿಗೆ ಬಂದಿದ್ದ ಗೀತಾ ತನ್ನ ಎಳೆಯ ಕಂದಮ್ಮನನ್ನು ಕಳೆದುಕೊಂಡು ರೋದಿಸುತ್ತಿರುವುದು ಎಂಥವರ ಕರುಳೂ ಕಿತ್ತು ಬರುತ್ತಿತ್ತು.

Facebook Comments