ಬೆಂಗಳೂರಲ್ಲಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ 6 ನೇಪಾಳಿಗಳ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.7-ಹಗಲಿನಲ್ಲಿ ಅಪಾರ್ಟ್‍ಮೆಂಟ್‍ಗಳಲ್ಲಿ ಸೆಕ್ಯೂರಿಟಿ ಕೆಲಸ, ರಾತ್ರಿ ವೇಳೆ ಕಳ್ಳತನವನ್ನೆ ಕಾಯಕವನ್ನಾಗಿಸಿಕೊಂಡಿದ್ದ ಆರು ನೇಪಾಳಿಗಳನ್ನು ಬಂಧಿಸಿರುವ ರಾಮಮೂರ್ತಿನಗರ ಪೊಲೀಸರು 17 ಲಕ್ಷ ಬೆಲೆಬಾಳುವ 340 ಗ್ರಾಂ ತೂಕದ ಚಿನ್ನಾಭರಣ ಹಾಗೂ 200 ಗ್ರಾಂನ ಬೆಳ್ಳಿ ಅಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ರಾಜೇಶ್ ಖಡಕ ಅಲಿಯಾಸ್ ಬಿಷ್ಣು, ಸಚಿನ್‍ಕುಮಾರ್ ಬೋರಾ ಅಲಿಯಾಸ್ ಭಮ್ಮಜೀ, ಮುಖೇಶ್ ಖಡ್ಕಾ, ಕರಣ ಖಡಕ ಅಲಿಯಾಸ್ ಕಿರಣ್ ಖಡಕ್, ರಾಜುಸಿಂಗ್ ಅಲಿಯಾಸ್ ಪುರಾನ್ ಖಡಕ್ ಹಾಗೂ ಎಗ್ಗಿರಾಜ್ ಖಡಕ್ ಬಂಧಿತ ನೇಪಾಳಿಗಳು.

ನೇಪಾಳಿ ಮೂಲದ ಆರೋಪಿಗಳು ಹಗಲಿನ ವೇಳೆ ಸೆಕ್ಯೂರಿಟಿ ಗಾರ್ಡ್‍ಗಳು, ಕಾರ್ ವಾಷ್ ಮಾಡುವ ಕೆಲಸ ಮಾಡುತ್ತಿದ್ದರೂ. ರಾತ್ರಿ ವೇಳೆ ಲಾಕ್ ಆಗಿರುವ ಮನೆಗಳನ್ನು ಗುರುತಿಸಿ ಮನೆಗಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಲಾಕ್‍ಡೌನ್ ಸಮಯದಲ್ಲಿ ಆರೋಪಿಗಳು ಕದ್ದ ವಸ್ತುಗಳನ್ನು ವಿಲೇವಾರಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಐದು ಮತ್ತು ಆರ್.ಆರ್.ನಗರದ ಒಂದು ಪ್ರಕರಣ ಸೇರಿದಂತೆ 6 ಕನ್ನಗಳವು ಪ್ರಕರಣಗಳನ್ನು ಪತ್ತೆ ಮಾಡಿ 17 ಲಕ್ಷ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಅಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಡಿಸಿಪಿ ಡಾ.ಶರಣಪ್ಪ ಮಾರ್ಗದರ್ಶನದಲ್ಲಿರಾಮಮೂರ್ತಿ ನಗರ ಠಾಣೆ ಇನ್ಸ್‍ಪೆಕ್ಟರ್ ಮೆಲ್ವಿನ್ ಫ್ರಾನ್ಸಿಸ್ ಮತ್ತವರ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments

Sri Raghav

Admin