ಬೊಲೊ ಉಗ್ರರ ದಾಳಿಗೆ 6 ಯೋಧರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ಯೌಂಡೇ, ಸೆ.16 (ಪಿಟಿಐ)- ಬೊಕೊ ಹರಂ ಉಗ್ರರು ನಡೆಸಿದ ಭೀಕರ ಆಕ್ರಮಣದಲ್ಲಿ ಕ್ಯಾಮರೂನ್‍ನ ಆರು ಯೋಧರು ಹತರಾಗಿ ಅನೇಕರು ಗಾಯಗೊಂಡಿದ್ದಾರೆ.  ಕ್ಯಾಮರೂನ್‍ನ ಲೇಕ್ ಚಾಡ್‍ನ ಪೋಟೋಕೊಲ್ ಬಳಿ ಸೋಯಿರಂ ಗ್ರಾಮದ ಸೇನಾ ನೆಲೆ ಮೇಲೆ ಬೊಕೊ ಹರಂ ಜಿಹಾದಿಗಳು ದಾಳಿ ನಡೆಸಿದರು.

ಈ ಆಕ್ರಮಣದಲ್ಲಿ ಆರು ಯೋಧರು ಹತರಾಗಿ, ಒಂಭತ್ತು ಸೈನಿಕರು ಗಾಯರೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  ಇದೇ ಪ್ರಾಂತ್ಯದಲ್ಲಿ ಜೂ.10ರಂದು ಬೊಕೊ ಹರಂ ಉಗ್ರರು ನಡೆಸಿದ ದಾಳಿಯಲ್ಲಿ 17 ಕ್ಯಾಮರೂನ್ ಯೋಧರು ಹತರಾಗಿ ಅನೇಕರು ಗಾಯಗೊಂಡಿದ್ದರು.  ನೈಜೀರಿಯಾ ಗಡಿ ಪ್ರದೇಶದಲ್ಲಿರುವ ಲೇಕ್ ಚಾಡ್ ಆಗಾಗ ಉಗ್ರರು ಮತ್ತು ಬಂಡುಕೋರರ ದಾಳಿಗೆ ಒಳಗಾಗುತ್ತಿದ್ದು, ಸಾವು-ನೋವು ಇಲ್ಲಿ ತೀರಾ ಸಾಮಾನ್ಯವಾಗಿದೆ.

Facebook Comments