60 ವರ್ಷಗಳಾದರೂ ಏಕೀಕರಣದ ಆಶಯ ಈಡೇರದಿರುವುದು ದುರದೃಷ್ಟಕರ : ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

bengaluru

ಬೆಂಗಳೂರು,ನ.1-ಕರ್ನಾಟಕ ಏಕೀಕರಣ ಗೊಂಡು 60 ವರ್ಷಗಳಾದರೂ ಏಕೀಕರಣದ ಆಶಯ ಈಡೇರದಿರುವುದು ದುರದೃಷ್ಟಕರ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಇಂದಿಲ್ಲಿ ಹೇಳಿದರು.ಮೈಸೂರು ಬ್ಯಾಂಕ್ ಹತ್ತಿರ ನೃಪತುಂಗ ಮಂಟಪದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 60 ವರ್ಷ ಕಳೆದರೂ ಏಕೀಕರಣದ ಆಶಯ ಈಡೇರಿಲ್ಲ ಎಂದು ಹೇಳಿದರು.ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ ಇನ್ನೂ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ.

ಈ ಸಂದರ್ಭದಲ್ಲಿ ಸಮಗ್ರ ಕರ್ನಾಟಕದ ಅಭಿವೃದ್ಧಿಯಾಗಬೇಕು ಎಂದು ಹೇಳಿದ ಅವರು ಪ್ರತ್ಯೇಕತೆ ಸೊಲ್ಲೆತ್ತುವುದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದರು.ಈ ಸಂದರ್ಭದಲ್ಲಿ ಕನ್ನಡ ಹೋರಾಟಗಾರರಾದ ಪಾಟೀಲ ಪುಟ್ಟಪ್ಪ, ಸಾಹಿತಿ ಚಂಪಾ, ಕಮಲಾ ಹಂಪನಾ ಸೇರಿದಂತೆ ಅನೇಕ ಗಣ್ಯರನ್ನು ಸನ್ಮಾನಿಸಿದರು.

 

► Follow us on –  Facebook / Twitter  / Google+

Facebook Comments

Sri Raghav

Admin