60 ಸಾವಿರ ಎಕರೆಗೆ ಹನಿ ನೀರಾವರಿ ಒದಗಿಸುವ ರಾಮತಾಳ ಯೋಜನೆ ಮುಂದಿನ ವರ್ಷ ಲೋಕಾರ್ಪಣೆ

ಈ ಸುದ್ದಿಯನ್ನು ಶೇರ್ ಮಾಡಿ

sdagasdfg

ವಿಜಯಪುರ, ಡಿ.22- ವಿಶ್ವದಲ್ಲಿಯೇ ಮೊದಲ ಬಾರಿಗೆ 60 ಸಾವಿರ ಎಕರೆ ಪ್ರದೇಶಕ್ಕೆ ಹನಿ ನೀರಾವರಿ ಮೂಲಕ ನೀರು ಒದಗಿಸುವ ರಾಮತಾಳ (ಮರೋಳ) ಏತ ನೀರಾವರಿ ಯೋಜನೆಯನ್ನು ಕೃಷ್ಣಭಾಗ್ಯ ಜಲನಿಗಮ ಅನುಷ್ಠಾನಗೊಳಿಸುತ್ತಿದೆ. ನಿಗಮವು ಈ ಯೋಜನೆಯ ಎರಡನೆ ಹಂತದಲ್ಲಿ ಪೈಲೆಟ್ ಯೋಜನೆಯಾಗಿ ಹನಿ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಂಡು ಮುಂದಿನ ವರ್ಷ ಲೋಕಾರ್ಪಣೆಗೊಳ್ಳಲಿದೆ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು. ಕೃಷ್ಣಭಾಗ್ಯ ಜಲನಿಗಮದ ಯೋಜನೆಗಳನ್ನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆಗೆ 2012ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, 786.11 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಐದು ವರ್ಷಗಳ ಕಾಲ ನಿರ್ವಹಣಾ ವೆಚ್ಚ ಒಳಗೊಂಡಿದೆ. ಕಾಲುವೆ ಮೂಲಕ ನೀರು ಹರಿಸುವ ಸಾಂಪ್ರದಾಯಿಕ ಪದ್ಧತಿಯಿಂದ 12.15 ಹೆಕ್ಟೇರ್ ಪ್ರದೇಶಕ್ಕೆ ಮಾತ್ರ ನೀರು ಒದಗಿಸಲಾಗುವುದು. ಆದರೆ, ಹನಿ ನೀರಾವರಿಯಿಂದ ಹೆಚ್ಚುವರಿಯಾಗಿ 11.850 ಪ್ರದೇಶಕ್ಕೆ ನೀರು ಪೂರೈಸಲಾಗುವುದು ಎಂದರು.

ಹುನಗುಂದ ತಾಲೂಕಿನ 24 ಸಾವಿರ ಎಕರೆಗೆ ಹನಿ ನೀರಾವರಿ ಸೌಲಭ್ಯ ದೊರೆಯಲಿದೆ. ಈ ಪದ್ಧತಿಯ ಸಂಪೂರ್ಣ ಕೇಂದ್ರೀಕೃತ ನಿಯಂತ್ರಣ ಹಾಗೂ ಸ್ವಯಂಚಾಲಿತವಾಗಿ ನಿರ್ವಹಿಸಲಿವೆ. ಹನಿ ನೀರಾವರಿಯಿಂದ ನೀರಿನ ಬಳಕೆ ಕಡಿಮೆಯಾಗಲಿದ್ದು, ಹೆಚ್ಚು ಬೆಳೆ ಬೆಳೆಯಲು ಅನುಕೂಲವಾಗಲಿದೆ. ಜತೆಗೆ ಕಡಿಮೆ ಪ್ರಮಾಣದ ಭೂ ಸ್ವಾಧೀನ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬಹುದು ಹಾಗೂ ನೀರಿನೊಂದಿಗೆ ಗೊಬ್ಬರ ಒದಗಿಸಬಹುದು ಅಲ್ಲದೆ, ನೀರಿನ ಅಧಿಕ ವ್ಯಯ ತಡೆಗಟ್ಟಬಹುದಾಗಿದೆ ಎಂದರು.

ಕೊಪ್ಪಳ ಏತ ನೀರಾವರಿ ಯೋಜನೆ:

ಕೊಪ್ಪಳ ಏತ ನೀರಾವರಿ ಯೋಜನೆಯು ಒಂದು ಪ್ರತಿಷ್ಠಿತ ನೀರಾವರಿ ಯೋಜನೆಯಾಗಿದೆ. ಬರ ಪೀಡಿತ ಕೊಪ್ಪಳ ಜಿಲ್ಲೆ ತಾಲೂಕುಗಳಾದ ಕುಷ್ಠಗಿ, ಯಲಬುರ್ಗ, ಕನಕಗಿರಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಮತ್ತು ಬಾದಾಮಿ ಹಾಗೂ ಗದಗ ಜಿಲ್ಲೆಯ ರೋಣ ಸೇರಿದಂತೆ ಒಟ್ಟು 2,76,600 ಪ್ರದೇಶಗಳಿಗೆ ಹನಿ ನೀರಾವರಿ ಮೂಲಕ ನೀರಾವರಿ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.

ಈ ಯೋಜನೆಯ ಮೊದಲು ಮತ್ತು ಎರಡನೆ ಮುಖ್ಯ ಸ್ಥಾವರಗಳಿಗೆ 1080 ಕೋಟಿ ರೂ. ವೆಚ್ಚವಾಗಲಿದೆ. ಟರ್ನ್ ಕೀ ಕಾಮಗಾರಿ ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆ. ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಎರಡು ಹಂತಗಳಲ್ಲಿ ಏತ ನೀರಾವರಿ ಮೂಲಕ ನೀರನ್ನು ಎತ್ತಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಯೋಜನೆಗೆ 2013ರಲ್ಲೇ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಪರಿಷ್ಕøತ ಒಟ್ಟು 7500 ಕೋಟಿ ರೂ. ಆಗಲಿದ್ದು, ಈಗಾಗಲೇ 890 ಕೋಟಿ ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರ ಸಹಾಯಧನದ ಅಡಿ ಕೊಪ್ಪಳ ಏತ ನೀರಾವರಿ ಯೋಜನೆಯ ಒಂದು ಮತ್ತು ಎರಡನೆ ಮುಖ್ಯ ಸ್ಥಾವರಗಳ ನಡುವಿನ ಕಾಲುವೆ ಮೇಲ್ಭಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ 10 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು. ಈ ಸಂದರ್ಭದಲ್ಲಿ ಕೃಷ್ಣಭಾಗ್ಯ ಜಲನಿಗಮದ ಉನ್ನತಾಧಿಕಾರಿಗಳು ಮತ್ತು ಎಂಜಿನಿಯರ್‍ಗಳು ಸುದ್ದಿಗಾರರಿಗೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin