ಭಾರತದಲ್ಲಿ ಕೊರೋನಾ ಹೊಸ ದಾಖಲೆ, ಒಂದೇ ದಿನ 6,088 ಮಂದಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 24-ಭಾರತದಲ್ಲಿ ವಿನಾಶಕಾರಿ ಕೊರೊನಾ ವೈರಸ್ ಮತ್ತಷ್ಟು ತೀವ್ರ ಸ್ವರೂಪದಲ್ಲಿ ಸ್ಫೋಟಗೊಂಡಿದೆ. ನಿನ್ನೆ ಒಂದೇ ದಿನ ಅಂದರೆ 24 ತಾಸುಗಳ ಅವಧಿಯಲ್ಲಿ 6,088 ಜನರಿಗೆ ಸೋಂಕು ದೃಢಪಟ್ಟಿದ್ದು. ಇದು ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ಭಾರೀಜಿಗಿತವಾಗಿದ್ದು, ಹೊಸ ದಾಖಲೆಯಾಗಿದೆ. ಇದೇ ಅವಧಿಯಲ್ಲಿ ಒಟ್ಟು 148 ಮಂದಿ ಸಾವಿಗೀಡಾಗಿದ್ದಾರೆ.

ಕಿಲ್ಲರ್ ವೈರಸ್ ಆರ್ಭಟ ಲಾಕ್‍ಡೌನ್ ಸಡಿಲಿಕೆ ನಂತರ ದಿನೇ ದಿನೇ ವ್ಯಾಪಕವಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಭಾರತದಲ್ಲಿ ಸಾವಿನ ಸಂಖ್ಯೆ 3,585 ದಾಟಿದ್ದು. ಸೋಂಕು ಪೀಡಿತರ ಸಂಖ್ಯೆ 1,18,401ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದು ಸರಾಸರಿ 5,000 ಪಾಸಿಟಿವ್ ಕೇಸ್ ದಾಖಲಾದ ಸತತ ಆರನೇ ದಿನ. ಮೇ 1ರಿಂದಲೂ ಅತಿ ಹೆಚ್ಚು ಸೋಂಕು ಪ್ರಕರಣಗಳು ದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಲೇಇದ್ದು, ದಿನೇ ದಿನೇ ಆಘಾತಕಾರಿ ಮಟ್ಟದಲ್ಲಿ ಉಲ್ಬಣಗೊಳ್ಳುತ್ತಿದೆ.

ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 148 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ. ಮಹಾರಾಷ್ಟ್ರದಲ್ಲಿ 64, ಗುಜರಾತ್‍ನಲ್ಲಿ 24, ದೆಹಲಿ 18, ಉತ್ತರಪ್ರದೇಶ 11, ತಮಿಳುನಾಡು 7, ಪಶ್ಚಿಮಬಂಗಾಳ 6, ತೆಲಂಗಾಣ 5, ರಾಜಸ್ತಾನ 4, ಮಧ್ಯಪ್ರದೇಶ 3, ಜಮ್ಮು-ಕಾಶ್ಮೀರ 2, ಬಿಹಾರ,.ಒಡಿಶಾ, ಹರಿಯಾಣ ಮತ್ತು ಪಂಬಾಜ್ ರಾಜ್ಯಗಳಲ್ಲಿ ತಲಾಒಂದು ಸಾವು ಪ್ರಕರಣ ವರದಿಯಾಗಿದೆ.

ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರದೇಶದಲ್ಲಿ ಡೆಡ್ಲಿ ಕೋವಿಡ್-19 ವೈರಸ್‍ಗೆ ಬಲಿಯಾದವರ ಸಂಖ್ಯೆ 3,585ಕ್ಕೇರಿದ್ದು, ಸಾಂಕ್ರಾಮಿಕ ರೋಗಿಗಳ ಸಂಖ್ಯೆ 1,18,501ತಲುಪಿದೆ. ಇಂದು ಮಧ್ಯರಾತ್ರಿಯೊಳಗೆ ಸೋಂಕಿತರ ಪ್ರಮಾಣ1.23 ಲಕ್ಷ ದಾಟುವ ಆತಂಕವೂ ಇದೆ.

ಲಾಕ್‍ಡೌನ್ ಸಡಿಲ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಶೇ.40.97ರಷ್ಟು ಸುಧಾರಣೆಕಂಡು ಬಂದಿದ್ದರೂ, ಮತ್ತೊಂದೆಡೆ ದಿನನಿತ್ಯ ಮರಣ ಮತ್ತು ಸಾಂಕ್ರಾಮಿಕರೋಗ ಪ್ರಕರಣಗಳು ಹೆಚ್ಚಾಗುತ್ತಲೇಇದೆ.

ಈವರೆಗೆ ಸಂಭವಿಸಿರುವ 3,585 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಆ ರಾಜ್ಯದಲ್ಲಿ ಒಟ್ಟು 1,454 ಸಾವುಗಳು ಸಂಭವಿಸಿದ್ದು,ಮಹಾರಾಷ್ಟ್ರದಲ್ಲಿ 41,642 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ.

ಎರಡನೇ ಸ್ಥಾನದಲ್ಲಿರುವಗುಜರಾತ್‍ನಲ್ಲಿ 773 ಸಾವುಗಳು ಸಂಭವಿಸಿವೆ. ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 66,330ರಷ್ಟಿದೆ. ಈ ಮಧ್ಯೆ, ಈವರೆಗೆ 48,533 (ಚೇತರಿಕೆ ಪ್ರಮಾಣ ಶೇ.40.97) ಮಂದಿ ಗುಣಮುಖರಾಗಿದ್ದಾರೆ.

ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡು ಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳ ಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಓಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

ಹೆಮ್ಮಾರಿ ನಿಗ್ರಹಕ್ಕಾಗಿ ಕೆಲವು ನಿರ್ಬಂಧಗಳ ಸಡಿಲಿಕೆಯೊಂದಿಗೆ ನಾಲ್ಕನೇ ಹಂತದ ಲಾಕ್‍ಡೌನ್‍ಜಾರಿಯಲ್ಲಿದ್ದು, ಇದರ ಬೆನ್ನಲ್ಲೇಆತಂಕಕಾರಿ ವಾತಾವರಣವೂ ನಿರ್ಮಾಣವಾಗಿದೆ. ಈಗಾಗಲೇ ಜಾರಿಗೆ ಬಂದಿರುವ ಲಾಕ್‍ಡೌನ್-4 ಈ ತಿಂಗಳಾಂತ್ಯದವರೆಗೂ ವಿಸ್ತರಣೆಯಾಗಿದೆ.

ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿ ಆರ್ಥಿಕ ಪುನ:ಶ್ಚೇತನ ಮತ್ತು ಸಾರ್ವಜನರಿಗೆ ಅನುಕೂಲ ಕಲ್ಪಿಸಿದ್ದರೂ, ಕೊರೊನಾ ದಾಳಿ ಮತ್ತಷ್ಟುತೀವ್ರವಾಗುವಆತಂಕವೂಎದುರಾಗಿದೆ.   ಜೂನ್‍ನಲ್ಲಿ ಕೊರೊನಾ ವೈರಸ್ ಸೋಂಕು ಮತ್ತು ಸಾವಿನ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಗಂಡಾಂತರವಿದ್ದು, ಭಾರತೀಯರು ಮತ್ತಷ್ಟು ಭಯಭೀತರಾಗಿದ್ದಾರೆ.

Facebook Comments

Sri Raghav

Admin