62ನೇ ವನ್ಯ ಜೀವಿ ಸಪ್ತಾಹ : ವಿವಿಧ ಕಾರ್ಯಕ್ರಮಗಳು

ಈ ಸುದ್ದಿಯನ್ನು ಶೇರ್ ಮಾಡಿ

12

ಗದಗ,ಸೆ.30- ಅರಣ್ಯ ಇಲಾಖೆ ಎರ್ಪಡಿಸುತ್ತಿರುವ 62ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಬಿಂಕದಕಟ್ಟಿ ಕಿರು ಮೃಗಾಲಯದಲ್ಲಿ ವಿದ್ಯಾರ್ಥಿಗಳಿಗೆ ವನ್ಯ ಜೀವಿಗಳ ಕುರಿತು ಜಾಗೃತಿ  ಮೂಡಿಸಲು ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಹೇಳಿದರು.ಅವರು ನಗರದ ಬಿಂಕದಕಟ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಅ. 1ರಿಂದ 6ರವರೆಗೆ 18ವರ್ಷದ ಒಳಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಕಿರು ಮೃಗಾಲಯದಲ್ಲಿ ಉಚಿತ ಪ್ರವೇಶವಿದ್ದು ವನ್ಯಜೀವಿಗಳ ಕುರಿತ ವಿಧ್ಯಾರ್ಥಿಗಳು ಅರಿವನ್ನು ಹೆಚ್ಚಿಸಿಕೊಳ್ಳಲು ಈ ಅವಕಾಶವನ್ನು ಕಲ್ಪಸಲಾಗಿದೆ ಎಂದು ಯಶಪಾಲ ಕ್ಷೀರಸಾಗರ ಹೇಳಿದರು.
ಅ.1ರಂದು ಮಧ್ಯಾಹ್ನ 1 ಗಂಟೆಗೆ 5ರಿಂದ 10ನೇ ತರಗತಿ ವಿಧ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ ಹಾಗೂ ಆಶುಭಾಷಣ ಸ್ಪರ್ಧೆ, 2ರಂದು ಬೆ. 8ಗಂಟೆಗೆ ಮುನ್ಸಿಪಲ್ ಹೈಸ್ಕೂಲದಿಂದ ಬಿಂಕದಕಟ್ಟಿ ಕಿರು ಮೃಗಾಲಯವರೆಗೆ ವಿದ್ಯಾರ್ಥಿಗಳ ಸೈಕಲ್ ಜಥಾ, 3ರಂದು ಮಧ್ಯಾಹ್ನ 1 ಗಂಟೆಗೆ 3 ರಿಂದ 6ನೇ ತರಗತಿ ವಿಧ್ಯಾರ್ಥಿಗಳಿಗಾಗಿ ಮೃಗಾಲಯ ಆವರಣದ ಗೋಡೆಗಳ ಮೇಲೆ ಚಿತ್ರಿಸಿರುವ ಪ್ರಾಣಿ ಪಕ್ಷಿಗಳನ್ನು ಗುರುತಿಸುವ ಸ್ಪರ್ಧೆ, 4ರಂದು ತಾಲೂಕ ಮಟ್ಟದ ಶೈಕ್ಷಣಿಕ ವಲಯಗಳಲ್ಲಿ ಜರುಗಿದ ವನ್ಯಪ್ರಾಣಿಗಳ ಚಿತ್ರ ಬಿಡಿಸುವ ಸ್ಪರ್ಧಾ ವಿಜೇತ ವಿಧ್ಯಾರ್ಥಿಗಳಿಗೆ ವನ್ಯ ಪ್ರಾಣಿಗಳ ಚಿತ್ರ ಬಿಡಿಸುವ ಸ್ಪರ್ಧೆ ಹಾಗೂ ಆಯುರ್ವೆದ ಗಿಡಮೂಲಿಕೆಗಳ ಕುರಿತು ಭಾಷಣ ಸ್ಪರ್ಧೆ, 5ರಂದು ರಸಪ್ರಶ್ನೆ, 9 ಮತ್ತು 10ನೇ ತರಗತಿ ವಿಧ್ಯಾರ್ಥಿಗಳಿಗಾಗಿ ಘೋಷಣೆಗಳನ್ನು ಬರೆಯುವ ಸ್ಪರ್ಧೆಗಳಲ್ಲದೆ ಪರಿಸರ ಹಾಗೂ ಉರಗ ತಜ್ಞರಿಂದ ಭಾಷಣ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಅ. 6ರಂದು ವಿವಿಧ ಸ್ಪರ್ಧೆ ವಿಜೇತರಿಗೆ ಕಪ್ಪತ್ತಗುಡ್ಡ ವೀಕ್ಷಣೆ ಹಾಗೂ ಸಾಯಂಕಾಲ 4 ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ, 7ರಂದು ಅರಣ್ಯ ಇಲಾಖೆ ಸಿಬ್ಬಂದಿಗಳಿಗಾಗಿ ಕ್ರೀಡಾ ಕೂಟ ಹಾಗೂ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಅಲ್ಲದೆ ಅ. 1ರಿಂದ 6ರ ವರೆಗೆ ಕಿರು ಮೃಗಾಲಯದಲ್ಲಿ ವನ್ಯ ಜೀವಿಗಳಿಗೆ ಸಂಬಂಧಿಸಿದ ಸಾಕ್ಷ್ಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು ಹಾಗೂ ಮಕ್ಕಳಿಗಾಗಿ ವನ್ಯ ಜೀವಿ ಹಾಗೂ ಪರಿಸರ ಕುರಿತು ಛಾಯಾಚಿತ್ರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ವಲಯ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ ಕ್ಷೀರಸಾಗರ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಂ. ಪತ್ತಾರ, ಮಹಾಂತೇಶ ಪೇಠಲೂರ ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin