64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಅಕ್ಷಯ್‍ಕುಮಾರ್ ಶ್ರೇಷ್ಠ ನಟ, ಕನ್ನಡದ 2 ಚಿತ್ರಗಳಿಗೂ ಪ್ರಶಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Akshay-Kumar--01

ನವದೆಹಲಿ, ಏ.7-ನವದೆಹಲಿಯಲ್ಲಿ ಇಂದು 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದ್ದು, ಬಾಲಿವುಡ್‍ನ ನೀರ್ಜಾ ಎಂಬ ಚಿತ್ರವು ಶ್ರೇಷ್ಠ ಚಿತ್ರ ಎಂದು ಪರಿಗಣಿಸಲ್ಪಟ್ಟಿದೆ.   ರುಸ್ತುಮ್ ಎಂಬ ಹಿಂದಿ ಚಿತ್ರದ ಅಭಿನಯಕ್ಕಾಗಿ ಅಕ್ಷಯ್‍ಕುಮಾರ್ ಶ್ರೇಷ್ಠ ನಟರಾಗಿ ಆಯ್ಕೆಯಾಗಿದ್ದಾರೆ. ನಟಿ ಸೋನಂ ಕಪೂರ್‍ಗೆ ವಿಶೇಷ ಪ್ರಶಸ್ತಿ ನೀಡಲಾಗಿದೆ.   ಕನ್ನಡ ಸಿನಿಮಾಗಳ ಪೈಕಿ ರಿಸರ್ವೇಷನ್ ಚಿತ್ರವು ಶ್ರೇಷ್ಠ ಪ್ರಾದೇಶಿಕ ಅನ್ನಿಸಿಕೊಂಡಿದೆ. ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರದ ಸಂಗೀತ ನಿರ್ದೇಶಕ ಪದ್ಮನಾಭ ಅವರಿಗೆ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಭಾಗದ ಎರಡು ಪ್ರಶಸ್ತಿಗಳು ಬಂದಿವೆ. ಅಲ್ಲಮ ಚಿತ್ರವನ್ನು ದಿವಂಗತ ಶ್ರೀಹರಿ ಖೋಡೆ ನಿರ್ಮಿಸಿದ್ದಾರೆ.  ಹಿರಿಯ ಮೇಕಪ್ ಕಲಾವಿದ ರಾಮಕೃಷ್ಣ ಅವರಿಗೆ ರಾಷ್ಟ್ರಪ್ರಶಸ್ತಿ ಬಂದಿರುವುದು ಒಂದು ಹೆಗ್ಗಳಿಕೆ.

ಕನ್ನಡದ ಎರಡು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿಯ ಗರಿ : 

ಟಿ.ಎಸ್.ನಾಗಾಭರಣ ನಿರ್ದೇಶನದ ಅಲ್ಲಮ ಚಿತ್ರಕ್ಕೆ ಎರಡು ರಾಷ್ಟ್ರ ಪ್ರಶಸ್ತಿಯ ಸಂಭ್ರಮ..
ಅತ್ಯುತ್ತಮ ಸಂಗೀತ ನಿರ್ದೇಶಕ- ಬಾ.ಪು. ಪದ್ಮನಾಭ (ಅಲ್ಲಮ ಚಿತ್ರ)
ಅತ್ಯುತ್ತಮ ಮೇಕಪ್ ಪ್ರಶಸ್ತಿ ಎನ್.ಕೆ.ರಾಮಕೃಷ್ಣನ್ (ಅಲ್ಲಮ)
ಅತ್ಯುತ್ತಮ ಕನ್ನಡ ಚಿತ್ರ- ರಿಜರ್ವೇಶನ್

ಅತ್ಯುತ್ತಮ ನಟಿ/ನಟ : 

ಅತ್ಯುತ್ತಮ ನಟಿ ಸುರಭಿ ಲಕ್ಷ್ಮೀ (ಮಲಯಾಳಂ)
ಅತ್ಯುತ್ತಮ ನಟ ಅಕ್ಷಯ್ ಕುಮಾರ್ (ರಿಸ್ತುಂ ಚಿತ್ರ)

ಪ್ರಶಸ್ತಿ ವಿಜೇತರ ಪಟ್ಟಿ ಹೀಗಿದೆ:

ಶ್ರೇಷ್ಠ ತಮಿಳು ಚಿತ್ರ- ಜೋಕರ್
ಶ್ರೇಷ್ಠ ಗುಜರಾತಿ ಚಿತ್ರ-ರಾಂಗ್ ಸೈಡ್ ರಾಜು
ಶ್ರೇಷ್ಠ ಮರಾಠಿ ಚಿತ್ರ-ದಶಕ್ರಿಯ
ಶ್ರೇಷ್ಠ ಹಿಂದಿ ಚಿತ್ರ-ನೀರ್ಜಾ
ಶ್ರೇಷ್ಠ ಬಂಗಾಳಿ ಚಿತ್ರ-ಬಿಸರ್ಜನ್
ಶ್ರೇಷ್ಠ ಕನ್ನಡ ಚಿತ್ರ-ರಿಸರ್ವೇಷನ್
ಶ್ರೇಷ್ಠ ದೃಶ್ಯ ಸಂಯೋಜನೆ -ಶಿರಾಯ್
ಶ್ರೇಷ್ಠ ಗಾಯಕಿ -ಇಮಾನ್ ಚಕ್ರಬೊರ್ತಿ
ಶ್ರೇಷ್ಠ ಗಾಯಕ- ಸುಂದರ್ ಅಯ್ಯರ್
ಶ್ರೇಷ್ಠ ನಟ-ಅಕ್ಷಯ್‍ಕುಮಾರ್
ಶ್ರೇಷ್ಠ ಸಾಮಾಜಿಕ ಪರಿಣಾಮ ಬೀರಿದ ಚಿತ್ರ – ಪಿಂಕ್
ಶ್ರೇಷ್ಠ ನಿರ್ದೇಶಕ- ರಾಜೇಶ್ ಮಾಪುಸ್ಕರ್

ಅತ್ಯುತ್ತಮ ತುಳು ಚಿತ್ರ- ಮುಡಿಪು
ಅತ್ಯುತ್ತಮ ಕೊಂಕಣಿ ಚಿತ್ರ- ಡಿ ಝರಾ ಝರಾ
ಅತ್ಯುತ್ತಮ ಹಿಂದಿ ಚಿತ್ರ -ನೀರ್ಜಾ
ಅತ್ಯುತ್ತಮ ಪೋಷಕ ನಟಿ ಜೈರಾ ವಾಸಿಂ-ದಂಗಲ್ ಚಿತ್

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin