640 ಟನ್ ತೂಕದ ಚೊಚ್ಚಲ ರಾಕೆಟ್ ಉಡಾವಣೆಗೆ ಇಸ್ರೋ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

ISRO-Lounch--01

ಚೆನ್ನೈ/ಬೆಂಗಳೂರು, ಮೇ 15– ದಕ್ಷಿಣ ಏಷ್ಯಾ ಉಪಗ್ರಹ (ಜಿ ಸ್ಯಾಟ್-9) ಉಡಾವಣೆ ಯಶಸ್ಸಿನಿಂದ ಮತ್ತಷ್ಟು ಪ್ರೇರಣೆಗೊಂಡಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ, ಈಗ 640 ಟನ್ ತೂಕದ ಜಿಎಸ್‍ಎಲ್‍ವಿ-ಮಾರ್ಕ್ 3 ರಾಕೆಟ್‍ನ ಚೊಚ್ಚಲ ಉಡ್ಡಯನಕ್ಕೆ ಸಜ್ಜಾಗಿದೆ.   ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜೂನ್ ಮೊದಲ ವಾರದಲ್ಲಿ ಸಂಪರ್ಕ ಉಪಗ್ರಹ ಜಿಎಸ್‍ಎಟಿ-19 ಹೊತ್ತು ರಾಕೆಟ್ ನಭಕ್ಕೆ ಚಿಮ್ಮಲಿದೆ. ಈ ಮೂಲಕ ಇಸ್ರೋ ಮತ್ತೊಂದು ದಾಖಲೆ ನಿರ್ಮಿಸಲಿದೆ.ರಾಕೆಟ್‍ನ ಬೃಹತ್ ಕ್ರಯೋಜೆನಿಕ್ ಎಂಜಿನ್‍ನನ್ನು ಚೆನ್ನೈನಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಅಭಿವೃದ್ದಿಗೊಳಿಸಿದ್ದು, ನಮ್ಮ 12 ವರ್ಷಗಳ ಪರಿಶ್ರಮಕ್ಕೆ ಪ್ರತಿಫಲ ದೊರೆಯುವ ಸಮಯ ಬಂದಿದೆ ಎಂದು ವಿಕ್ರಮ್ ಸಾರಾಭಾಯಿ ಅಂತರಿಕ್ಷ ಕೇಂದ್ರದ (ವಿಎಸ್‍ಎಸ್‍ಸಿ) ನಿರ್ದೇಶಕ ಕೆ.ಸಿವನ್ ತಿಳಿಸಿದ್ದಾರೆ.  ಇದು ಹೊಸ ರಾಕೆಟ್ ಆಗಿರುವ ಕಾರಣ ವ್ಯಾಪಕ ಮತ್ತು ವಿಸ್ತತ ಪರೀಕ್ಷೆಗಳನ್ನು ನಡೆಸಲಾಗಿದೆ. ಜಿಎಸ್‍ಎಟಿ-19 ಉಪಗ್ರಹ ಸುಮಾರು 3.2 ಟನ್ ತೂಕವಿದೆ. ಭಾರತದ ರಾಕೆಟ್ ಒಂದು ಅತ್ಯಧಿಕ ತೂಕದ ಉಪಗ್ರಹವನ್ನು ಅಂತರಿಕ್ಷಕ್ಕೆ ಹೊತ್ತೊಯ್ಯುತ್ತಿರುವುದು ಇದೇ ಮೊದಲು ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.

ಬಹುಪಯೋಗಿ ರಾಕೆಟ್‍ನ ಜೀವಿತಾವಧಿ 15 ವರ್ಷಗಳು. ಭಾರತದಲ್ಲಿ ಪ್ರಸ್ತುತ ಪೋಲಾಟ್ ಸ್ಯಾಟಿಲೈಟ್ ಲಾಂಚ್ ವೆಹಿಕಲ್ ಮತ್ತು ಜಿಎಸ್‍ಎಲ್‍ವಿ-ಮಾರ್ಕ್ 2 ಎಂಬ ಎರಡು ರಾಕೆಟ್‍ಗಳಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin