ಭಾರತದಲ್ಲಿ ಸತತ 5ನೇ ದಿನ 6,000ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್, 1.50 ಲಕ್ಷ ಸನಿಹದಲ್ಲಿ ಸೋಂಕಿತರ ಸಂಖ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಮುಂಬೈ, ಮೇ 26- ಭಾರತದಲ್ಲಿ ವಿನಾಶಕಾರಿ ಕೊರೊನಾ ವೈರಸ್ ದಾಳಿಯ ವೇಗ ನಾಗಾಲೋಟದತಿ ವ್ರತೆ ಪಡೆದಿದೆ. ಸಾಂಕ್ರಾಮಿಕ ರೋಗದ ಪಾಸಿಟಿವ್ ಪ್ರಕರಣಗಳ ಪ್ರಮಾಣ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.  ದೇಶದಲ್ಲಿ ಸತತ ಐದನೇ ದಿನ 6,000ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಪತ್ತೆಯಾಗಿರುವುದು ಆತಂಕಕಾರಿಯಾಗಿದೆ.

ದೇಶದಲ್ಲಿ ಮೃತರ ಸಂಖ್ಯೆ 4,150 ದಾಟಿದ್ದು, 1.45 ಲಕ್ಷಕ್ಕೂ ಅಧಿಕ ಮಂದಿ ಸಾಂಕ್ರಾಮಿಕ ರೋಗದಿಂದ ನರಳುತ್ತಿದ್ದು, ಸಾವು ಮತ್ತು ಸೋಂಕು ಮತ್ತಷ್ಟು ಹೆಚ್ಚಾಗುವ ಆತಂಕವಿದೆ.ನಿನ್ನೆ ಒಂದೇ ದಿನ ಅಂದರೆ 24 ತಾಸುಗಳ ಅವಧಿಯಲ್ಲಿ 6,535 (ಭಾನುವಾರ 6,977, ಶನಿವಾರ 6,767, ಶುಕ್ರವಾರ 6,654, ಮತ್ತು ಗುರುವಾರ 6,088 ಕೇಸ್‍ಗಳು) ಜನರಿಗೆ ಸೋಂಕು ದೃಢಪಟ್ಟಿದೆ.

ಸಾಂಕ್ರಾಮಿಕ ರೋಗ ಉಲ್ಬಣದಲ್ಲಿ ಸತತ ಐದನೇ ದಿನದ ಭಾರೀ ಜಿಗಿತವಾಗಿದೆ. ಅಲ್ಲದೇ ಕಳೆದ ನಾಲ್ಕು ದಿನಗಳಿಂದಲೂ 6,500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‍ಗಳು ದಾಖಲಾಗಿವೆ.ಇದೇ ಅವಧಿಯಲ್ಲಿ ಒಟ್ಟು 154 ಮಂದಿ ಸಾವಿಗೀಡಾಗಿದ್ದು, ಒಟ್ಟಾರೆ ಮೃತ ಸಂಖ್ಯೆ4,169ಕ್ಕೇರಿದೆ. ಭಾರತದಲ್ಲಿ. ಸೋಂಕು ಪೀಡಿತರ ಸಂಖ್ಯೆ 1,45,380ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಅಲ್ಲದೇ ಕಳೆದ 11 ದಿನಗಳಿಂದ ನಿರಂತರವಾಗಿ 5,500 ಪಾಸಿಟಿವ್ ಕೇಸ್‍ಗಳು ದಾಖಲಾಗಿದೆ. ಕೇವಲ 25 ದಿನಗಳಲ್ಲೇ ಸೋಂಕಿತರ ಸಂಖ್ಯೆ ಒಂದು ಲಕ್ಷದಾಟಿರುವುದು ಪರಿಸ್ಥಿತಿಯ ಭೀಕರತೆಗೆ ಸಾಕ್ಷಿಯಾಗಿದೆ. ಮೇ 1ರಿಂದಲೂ ಅತಿ ಹೆಚ್ಚು ಸೋಂಕು ಪ್ರಕರಣಗಳು ದೇಶದ ವಿವಿಧ ರಾಜ್ಯಗಳಲ್ಲಿ ವರದಿಯಾಗುತ್ತಲೇ ಇದ್ದು, ದಿನೇ ದಿನೇ ಆಘಾತಕಾರಿ ಮಟ್ಟದಲ್ಲಿ ಉಲಗೊಳ್ಳುತ್ತಿದೆ. ನಿನ್ನೆ ಬೆಳಗ್ಗೆ 8 ಗಂಟೆಯಿಂದ 24 ಗಂಟೆಗಳ ಅವಧಿಯಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 146 ಮಂದಿಯನ್ನು ಕಿಲ್ಲರ್ ಕೊರೊನಾ ಬಲಿ ತೆಗೆದುಕೊಂಡಿದೆ.

ಮಹಾರಾಷ್ಟ್ರದಲ್ಲಿ 60, ಗುಜರಾತ್ 30, ದೆಹಲಿ 15, ಮಧ್ಯಪ್ರದೇಶ 10, ತಮಿಳುನಾಡು 7, ಉತ್ತರ ಪ್ರದೇಶ 6, ತೆಲಂಗಾಣ 4, ರಾಜಸ್ತಾನ ಮತ್ತು ಪಶ್ಚಿಮಬಂಗಾಳ 6, ಉತ್ತರಪ್ರದೇಶ ಮತ್ತು ರಾಜಸ್ತಾನತಲಾ ನಾಲ್ಕು, ತೆಲಂಗಾಣ ಮೂರು ಹಾಗೂ ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಹಾಗೂ ಕರ್ನಾಟಕ ತಲಾ ಎರಡು ಹಾಗೂ ಕೇರಳ ರಾಜ್ಯದಲ್ಲಿ ಒಂದು ಸಾವು ಪ್ರಕರಣ ವರದಿಯಾಗಿದೆ.

ಇಂದು ಮಧ್ಯರಾತ್ರಿಯೊಳಗೆ ಸೋಂಕಿತರ ಪ್ರಮಾಣ1.50 ಲಕ್ಷದಾಟುವ ಆತಂಕವೂ ಇದೆ. ಈವರೆಗೆ ಸಂಭವಿಸಿರುವ 4,169 ಸಾವು ಪ್ರಕರಣಗಳಲ್ಲಿ, ಮಹಾರಾಷ್ಟ್ರ ಎಂದಿನಂತೆ ಪ್ರಥಮ ಸ್ಥಾನದಲ್ಲಿಯೇ ಮುಂದುವರಿದಿದೆ. ಮರಾಠಿಗರ ರಾಜ್ಯದಲ್ಲಿ 1,696 ಮಂದಿ ಸಾವಿಗೀಡಾಗಿದ್ದು, ಸೋಂಕಿತರ ಸಂಖ್ಯೆ 52,669ಕ್ಕೇರಿದೆ. ಎರಡನೇ ಸ್ಥಾನದಲ್ಲಿರುವ ಗುಜರಾತ್‍ನಲ್ಲಿ 889 ಸಾವುಗಳು ಸಂಭವಿಸಿವೆ. ನಂತರದ ಸ್ಥಾನಗಳಲ್ಲಿ ಮಧ್ಯಪ್ರದೇಶ (300), ಪಶ್ಚಿಮ ಬಂಗಾಳ (278), ದೆಹಲಿ (276). ರಾಜಸ್ತಾನ (167),ಉತ್ತರ ಪ್ರದೇಶ (165), ತಮಿಳುನಾಡು (118), ಆಂಧ್ರಪ್ರದೇಶ ಮತ್ತು ತೆಲಂಗಾಣ (56), ಕರ್ನಾಟಕ(44) ಹಾಗೂ ಪಂಜಾಬ್ (40) ರಾಜ್ಯಗಳಿವೆ.

ಜಮ್ಮು-ಕಾಶ್ಮೀರ 23, ಹರಿಯಾಣ 16,ಬಿಹಾರ13, ಒಡಿಶಾ ಏಳು, ಕೇರಳ ಮತ್ತು ಹಿಮಾಚಲ ಪ್ರದೇಶ ತಲಾ ಐದು, ಜಾರ್ಖಂಡ್ ಮತ್ತು ಅಸ್ಸಾಂತಲಾ ನಾಲ್ಕು, ಚಂಡಿಗಢ ಮತ್ತು ಉತ್ತರಾಖಂಡ ತಲಾ ಮೂರು ಹಾಗೂ ಪುದುಚೇರಿ, ಮತ್ತು ಮೇಘಾಲಯ ರಾಜ್ಯಗಳಲ್ಲಿ ತಲಾ ಒಂದೊಂದು ಸಾವುಗಳು ವರದಿಯಾಗಿವೆ.  ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, 80,722ರಷ್ಟಿದೆ. ಈ ಮಧ್ಯೆ, ಈವರೆಗೆ 60,490 (ಚೇತರಿಕೆ ಪ್ರಮಾಣ ಶೇ.41.61) ಮಂದಿ ಗುಣಮುಖರಾಗಿದ್ದಾರೆ.

ಲಾಕ್‍ಡೌನ್ ಸಡಿಲ ನಂತರದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು, ಸಾವು-ಸೋಂಕು ವ್ಯಾಪಕವಾಗಿ ಉಲ್ಬಣಗೊಂಡಿದೆ. ಒಂದೆಡೆ ಚೇತರಿಕೆ ಪ್ರಮಾಣದಲ್ಲಿ ಶೇ.41.61ರಷ್ಟಿದ್ದು, ಗುಣಮುಖವಾಗುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ.  ದೇಶದಲ್ಲಿ ವೈರಾಣು ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯಲ್ಲಿ ವೃದ್ದಿ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾದರೂ, ಮತ್ತೊಂದಡೆ ಸೋಂಕು ಮತ್ತು ಸಾವು ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ.

ಇಂದು ಬೆಳಗ್ಗೆಯೂ ಕೆಲವು ರಾಜ್ಯಗಳಲ್ಲಿ ಸಾವು ಪ್ರಕರಣಗಳು ವರದಿಯಾಗಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ತಾನ, ಪಶ್ಚಿಮ ಬಂಗಾಳ, ದೆಹಲಿ, ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್, ಒಡಿಶಾ ಮತ್ತಿತರ ರಾಜ್ಯಗಳಲ್ಲಿ ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ.

Facebook Comments