ವಿದೇಶದಿಂದ ಬೆಂಗಳೂರಿಗೆ ಆಗಮಿಸಿದ 656 ಅನಿವಾಸಿ ಭಾರತೀಯರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ಲಾಕ್ ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಜಕಾರ್ತ, ಕೌಲಾಲಂಪುರ್ ಸೇರಿದಂತೆ ವಿದೇಶದಿಂದ ಒಟ್ಟು 656 ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.

ನಿನ್ನೆ ರಾತ್ರಿಯಿಂದ ಇಂದು ಬೆಳಗಿನಜಾವದವರೆಗೆ ಬೇರೆ ಬೇರೆ ವಿಮಾನಗಳ ಮೂಲಕ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಕಾರ್ತದಿಂದ 214, ಮಾಲೆಯಿಂದ 152, ದೋಹಾದಿಂದ 182 ಹಾಗೂ ಕೌಲಾಲಂಪೂರ್ ನಿಂದ 108 ಪ್ರಯಾಣಿಕರು ಆಗಮಿಸಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.

ಇಂಡೋನೇಷ್ಯಾದ ಜರ್ಕಾತದಿಂದ ಇಂದು ಬೆಳಗಿನ ಜಾವ 1.40 ಗಂಟೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹನ್ನೆರಡನೆಯ ವಿಮಾನದಲ್ಲಿ 214 ಮಂದಿ ಅನಿವಾಸಿ ಭಾರತೀಯರು ಆಗಮಿಸಿದ್ದಾರೆ.

ಮಾಲ್ಡೀವ್ಸ್‍ನ ಮಾಲೆಯಿಂದ ನಿನ್ನೆ ರಾತ್ರಿ 6.50 ಗಂಟೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಂಭತ್ತನೇ ಏರ್ ಇಂಡಿಯಾ ವಿಮಾನದಲ್ಲಿ ಒಟ್ಟು 152 ಮಂದಿ ಪ್ರಯಾಣಿಕರಲ್ಲಿ ಇಬ್ಬರು ಗರ್ಭಿಣಿಯರು, ಹತ್ತು ವರ್ಷದೊಳಗಿನ ಒಂದು ಮಗು ಸೇರಿದಂತೆ 132 ಪುರುಷರು ಮತ್ತು 20 ಮಹಿಳೆಯರು ಇದ್ದಾರೆ.

ಕತಾರ್ ನ ದೋಹಾದಿಂದ ನಿನ್ನೆ ರಾತ್ರಿ 9 ಗಂಟೆಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದ ಹತ್ತನೇ ಏರ್ ಇಂಡಿಯಾ ವಿಮಾನದಲ್ಲಿ ಒಟ್ಟು 182 ಮಂದಿ ಪ್ರಯಾಣಿಕರಲ್ಲಿ ಹತ್ತು ವರ್ಷದೊಳಗಿನ 16 ಮಕ್ಕಳು, 127 ಪುರುಷರು ಮತ್ತು 39 ಮಹಿಳೆಯರು ಇದ್ದಾರೆ.

ಮಲೇಷ್ಯಾದ ಕೌಲಾಲಂಪುರ್ ನಿಂದ ನಿನ್ನೆ ರಾತ್ರಿ 9.30 ಗಂಟೆಗೆ ನಿಲ್ದಾಣಕ್ಕೆ ಬಂದಿಳಿದ ಒಟ್ಟು 108 ಮಂದಿ ಪ್ರಯಾಣಿಕರಲ್ಲಿ ಒಬ್ಬರು ಗರ್ಭಿಣಿ ಮಹಿಳೆ, ಇಬ್ಬರು ಮಕ್ಕಳು ಸೇರಿದಂತೆ 80 ಪುರುಷರು ಮತ್ತು 28 ಮಹಿಳೆಯರು ಇದ್ದಾರೆ.

ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಲ್ಲ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಇಬ್ಬರನ್ನು ಹೊರತುಪಡಿಸಿದರೆ ಯಾವುದೇ ಪ್ರಯಾಣಿಕರಲ್ಲಿ ಕೊರೋನಾ ವೈರಾಣು ಸೋಂಕಿನ ಲಕ್ಷಣಗಳು ಕಂಡುಬಂದಿರುವುದಿಲ್ಲ.

ಮಾಲೆಯಿಂದ ಆಗಮಿಸಿದ152 ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದ್ದು, ಇಬ್ಬರಲ್ಲಿ ಕೊರೋನಾ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆ ಅವರನ್ನು ನಿಗದಿತ ಆಸ್ಪತ್ರೆಗೆ ಕ್ವಾರಂಟೈನ್‍ಗಾಗಿ ಕಳುಹಿಸಿಕೊಡಲಾಗಿದೆ.

ವಿದೇಶದಿಂದ ಆಗಮಿಸಿದ ಉಳಿದ 654 ಪ್ರಯಾಣಿಕರನ್ನು ಹೊಟೆಲï ಗಳಲ್ಲಿ 14 ದಿನಗಳ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Facebook Comments

Sri Raghav

Admin