65ನೇ ಫಿಲಂಫೇರ್ ಅವಾರ್ಡ್ : ರಣವೀರ್, ಆಲಿಯಾ ಭಟ್ ಶ್ರೇಷ್ಠ ನಟ-ನಟಿ, 13 ಪ್ರಶಸ್ತಿ ಬಾಚಿದ ‘ಗಲ್ಲಿಬಾಯ್‍’

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ(ಅಸ್ಸಾಂ), ಫೆ.16-ಭಾರತೀಯ ಚಿತ್ರರಂಗದ ಆಸ್ಕರ್ ಎಂದೇ ಬಿಂಬಿತವಾಗಿರುವ ಪ್ರತಿಷ್ಠಿತ ಫಿಲ್ಮ್‍ಫೇರ್ ಪ್ರಶಸ್ತಿಗಳನ್ನು ಕೊಡ ಮಾಡಲಾಗಿದ್ದು ಜೋಯಾ ಆಖ್ತರ್ ನಿರ್ದೇಶನದ ರಣವೀರ್ ಮತ್ತು ಅಲಿಯಾ ಭಟ್ ನಟನೆಯ ಗಲ್ಲಿ ಬಾಯ್ ಒಟ್ಟು 13 ಪ್ರಶಸ್ತಿಗಳನ್ನು ಗಳಿಸಿ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

ಈಶಾನ್ಯ ರಾಜ್ಯ ಆಸ್ಸಾಂ ರಾಜಧಾನಿ ಗುವಾಹತಿಯಲ್ಲಿ ನಿನ್ನೆ ರಾತ್ರಿ ನಡೆದ ವರ್ಣರಂಜಿತ 65ನೇ ಅಮೆಝಾನ್ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಹಿಂದಿ ಚಿತ್ರರಂಗ ಸಾಧಕರಿಗೆ ಪ್ರದಾನ ಮಾಡಲಾಯಿತು.

ರ್ಯಾಪರ್ ಸಂಗೀತಗಾರನ ಕುರಿತ ಗಲ್ಲಿ ಬಾಯ್ ಸಿನಿಮಾ ನಾಮನಿರ್ದೇಶನಗೊಂಡ ಎಲ್ಲ 13 ವಿಭಾಗಗಳನ್ನು ಪ್ರಶಸ್ತಿಗಳನ್ನು ಗಳಿಸಿದೆ ಈ ಮೂಲಕ ಈ ಹಿಂದೆ ಬ್ಲಾಕ್ ಸಿನಿಮಾ ಗಳಿಸಿದ್ದ 11 ಫಿಲ್ಮ್‍ಪೇರ್ ಪ್ರಶಸ್ತಿಗಳ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.

ಶ್ರೇಷ್ಠ ಚಿತ್ರ, ಶ್ರೇಷ್ಠ ನಿರ್ದೇಶಕ (ಜೋಯಾ ಆಖ್ತರ್), ಶ್ರೇಷ್ಠ ನಟ (ರಣವೀರ್ ಸಿಂಗ್), ಶ್ರೇಷ್ಠ ನಟಿ (ಅಲಿಯಾ ಭಟ್), ಶ್ರೇಷ್ಠ ಪೋಷಕ ನಟ (ಸಿದ್ಧಾಂತ್ ಚತುರ್ವೇದಿ), ಶ್ರೇಷ್ಠ ಪೋಷಕ ನಟಿ (ಅಮೃತಾ ಸುಭಾಷ್) ಸೇರಿದಂತೆ ಒಟ್ಟು 13 ಪ್ರಶಸ್ತಿಗಳನ್ನು ಗಲ್ಲಿ ಬಾಯ್ ಬಾಚಿಕಂಡಿದೆ. ಆಸ್ಕರ್ ಪ್ರಶಸ್ತಿಗೆ ಈ ಚಿತ್ರ ಭಾರತದಿಂದ ಆಯ್ಕೆಯಾಗಿದ್ದರೂ, ಪ್ರತಿóಷ್ಟಿತ ಪುರಸ್ಕಾರದಿಂದ ವಂಚಿತವಾಗಿತ್ತು.

ಅನುಭವ್ ಸಿನ್ಹ ನಿರ್ದೇಶನದ ಆಯುಷ್ಮಾನ್ ಖುರಾನಾ ಅಭಿನಯದ ಆರ್ಟಿಕಲ್ 15 ಸಿನಿಮಾ ಶ್ರೇಷ್ಠ ಚಿತ್ರ (ವಿಮರ್ಶೆ) ಪ್ರಶಸ್ತಿ ಗಳಿಸಿದೆ. ಇದೇ ಚಿತ್ರಕ್ಕಾಗಿ ಆಯುಷ್ಮಾನ್ ಖುರಾನಾ ಶ್ರೇಷ್ಠ ನಟ (ವಿಮರ್ಶೆ) ಪ್ರಶಸ್ತಿಗೆ ಪಾತ್ರರಾದರು. ಅಭಿಷೇಕ್ ಚೌಬೆ ನಿರ್ದೇಶನದ ಸೋಂಚಾರಿಯಾ ಚಿತ್ರ ಕೂಡ ಶ್ರೇಷ್ಠ ಚಿತ್ರ (ವಿಮರ್ಶೆ ಪ್ರಶಸ್ತಿ ಪಡೆದಿದೆ.

ವಿಶ್ವದ ಅತ್ಯಂತ ಹಿರಿಯ ಶಾರ್ಪ್ ಶೂಟರ್‍ಗಳ ಜೀವನ ಕುರಿತ ಸಾಂದ್ ಕೀ ಆಂಖ್ ಸಿನಿಮಾದ ಶ್ರೇಷ್ಠ ಅಭಿನಯ (ವಿಮರ್ಶೆ) ಪ್ರಶಸ್ತಿಗಳಿಗೆ ಚಿತ್ರ ನಾಯಕಿಯರಾದ ಭೂಮಿ ಪೆಡ್ನೆಕರ್ ಮತ್ತು ತಾಪ್ಸಿ ಪನ್ನು ಭಾಜನರಾಗಿದ್ದಾರೆ. ಹಿರಿಯ ನಟ ಗೋವಿಂದ ಅವರಿಗೆ ಸಿನಿಮಾರಂಗ ಉತ್ಕøಷ್ಟತೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪ್ರಶಸ್ತಿ ಪುರಸ್ಕೃತರು :
ಶ್ರೇಷ್ಠ ಚಿತ್ರ-ಗಲ್ಲಿ ಬಾಯ್)
ಶ್ರೇಷ್ಠ ನಿರ್ದೇಶಕ-ಜೊಯಾ ಆಖ್ತರ್ (ಗಲ್ಲಿ ಬಾಯ್)
ಶ್ರೇಷ್ಠ ಚಿತ್ರ (ವಿಮರ್ಶೆ)-ಅರ್ಟಿಕಲ್ 15 (ನಿರ್ದೇಶಕ ಅನುಭವ್ ಸಿನ್ಹಾ),
ಶ್ರೇಷ್ಠ ಚಿತ್ರ (ವಿಮಶೆ)-ಸೋಂಚಾರಿಯಾ (ನಿರ್ದೇಶಕ ಅಭಿಷೇಕ್ ಚೌಬೆ)
ಶ್ರೇಷ್ಠ ನಾಯಕ ನಟ-ರಣವೀರ್ ಸಿಂಗ್(ಗಲ್ಲಿ ಬಾಯ್)
ಶ್ರೇಷ್ಠ ನಾಯಕಿ-ಅಲಿಯಾ ಭಟ್ (ಗಲ್ಲಿ ಬಾಯ್)
ಶ್ರೇಷ್ಠ ನಾಯಕ (ವಿಮರ್ಶೆ)-ಆಯುಷ್ಮಾನ್ ಖುರಾನಾ(ಆರ್ಟಿಕಲ್ 15)
ಶ್ರೇಷ್ಠ ನಾಯಕಿಯರು (ವಿಮರ್ಶೆ)-ಭೂಮಿ ಪೆಡ್ನೆಕರ್ ಮತ್ತು ತಾಪ್ಸಿ ಪನ್ನು(ಸಾಂದ್ ಕೀ ಆಂಖ್)
ಶ್ರೇಷ್ಠ ಪೋಷಕ ನಟಿ=ಅಮೃತಾ ಸುಭಾಷ್ (ಗಲ್ಲಿ ಬಾಯ್)
ಶ್ರೇಷ್ಠ ಪೋಷಕ ನಟ=ಸಿದ್ಧಾಂತ್ ಚತುರ್ವೇದಿ (ಗಲ್ಲಿ ಬಾಯ್)
ಶ್ರೇಷ್ಠ ಮ್ಯೂಸಿಕ್ ಆಲ್ಬಮ್-ಜೊಯಾ ಆಖ್ತರ್-ಅಂಕುರ್ ತಿವಾರಿ ಹಾಗೂ ಕಬೀರ್ ಸಿಂಗ್, ಮಿಥುನ್, ಅಮಾಲ್ ಮಲ್ಲಿಕ್, ವಿಶಾಲ್ ಮಿಶ್ರಾ, ಸಚೇತ್-ಪರಂಪರ ಮತ್ತು ಅಖಿಲ್ ಸಚ್‍ದೇವ್ (ಗಲ್ಲಿ ಬಾಯ್)
ಶ್ರೇಷ್ಠ ಗೀತರಚನೆ-ಡಿವೈನ್ ಮತ್ತು ಅಂಕುರ್ ತಿವಾರಿ-ಅಪ್ನಾ ಟೈಮ್ ಆಯೇಗಾ (ಗಲ್ಲಿ ಬಾಯ್)
ಶ್ರೇಷ್ಠ ಹಿನ್ನಲೆ ಗಾಯಕ-ಅರಿಜಿತ್ ಸಿಂಗ್-ಕಳಂಕ್ ನಹಿ(ಕಳಂಕ್
ಶ್ರೇಷ್ಠ ಹಿನ್ನೆಲೆ ಗಾಯಕಿ-ಶಿಲ್ಪ ರಾವ್-ಘುಂಗ್ರೂ (ವಾರ್)
ಶ್ರೇಷ್ಠ ಉದಯೋನ್ಮುಖ ನಿರ್ದೇಶಕ-ಆದಿತ್ಯ ಧರ್
(ಉರಿ : ದಿ ಸರ್ಜಿಕಲ್ ಸ್ಟ್ರೈಕ್)
ಶ್ರೇಷ್ಠ ಉದಯೋನ್ಮುಖ ನಟ=ಅಭಿಮನ್ಯ ದಸ್ಸಾನಿ (ಮರ್ದ್ ಕೋ ದರ್ದ್ ನಹಿ ಹೋತಾ)
ಶ್ರೇಷ್ಠ ಉದಯೋನ್ಮುಖ ನಟಿ=ಅನನ್ಯ ಪಾಂಡೆ(ಪತಿ ಪತ್ನಿ ಔರ್ ವೋ)
ಶ್ರೇಷ್ಠ ಮೂಲಕಥೆ=ಆರ್ಟಿಕಲ್ 15(ಅನುಭವ್ ಸಿನ್ಹಾ ಮತ್ತು ಗೌರವ್ ಸೋಳಂಕಿ
ಶ್ರೇಷ್ಠ ಚಿತ್ರಕಥೆ-ಗಲ್ಲಿ ಬಾಯ್ (ರೀಮಾ ಕಗ್ಟಿ ಮತ್ತು ಜೊಯಾ ಅಖ್ತರ್)
ಶ್ರೇಷ್ಠ ಸಂಭಾಷಣೆ-ಗಲ್ಲಿ ಬಾಯ್ (ವಿಜಯ್ ಮËರ್ಯ)
ಜೀವಮಾನ ಸಾಧನೆ ಪ್ರಶಸ್ತಿ-ರಮೇಶ್ ಸಿಪ್ಪಿ
ಎಕ್ಸೆಲೆನ್ಸ್ ಇನ್ ಸಿನಿಮಾ ಗೋವಿಂದ
ಉದಯೋನ್ಮುಖ ಸಂಗೀತ ಪ್ರತಿಭೆಗಾಗಿ ಆರ್.ಡಿ. ಬರ್ಮನ್ ಪ್ರಶಸ್ತಿ – ಶಾಶ್ವತ್ ಸಚ್‍ದೇವ್-ಉರಿ

Facebook Comments

Sri Raghav

Admin