67ನೇ ವಸಂತಕ್ಕೆ ಕಾಲಿಟ್ಟ ಮೋದಿ, ಹೆಮ್ಮೆಯ ಪುತ್ರನಿಗೆ ಮಾತೃಶ್ರೀ ಆಶೀರ್ವಾದ

ಈ ಸುದ್ದಿಯನ್ನು ಶೇರ್ ಮಾಡಿ

Modi--041

ಅಹಮದಾಬಾದ್, ಸೆ.17-ಅಂತಾರಾಷ್ಟ್ರೀಯ ಮಟ್ಟದಲ್ಲೂ ಸಂಚಲನ ಮೂಡಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು 67ನೇ ಜನ್ಮದಿನದ ಸಡಗರ-ಸಂಭ್ರಮ. ಅವರ ಹುಟ್ಟುಹಬ್ಬವನ್ನು ಇಂದು ದೇಶಾದ್ಯಂತ ಸೇವಾ ದಿವಸ್ ಆಗಿ ಆಚರಿಸಲಾಗುತ್ತಿದ್ದು, ವಿವಿಧ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತಿವೆ.  ಸೆಪ್ಟೆಂಬರ್ 17, 1950ರಲ್ಲಿ ಜನಿಸಿದ ಪ್ರಧಾನಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ದೇಶದ ವಿವಿಧ ನಗರಗಳಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಮೋದಿ ಜನ್ಮದಿನದ ಪ್ರಯುಕ್ತ ವೈದ್ಯಕೀಯ ಶಿಬಿರ, ರಕ್ತದಾನ ಶಿಬಿರ, ನೇತ್ರದಾನ ಶಿಬಿರ, ಸ್ವಚ್ಛತಾ ಕಾರ್ಯಗಳೂ ಸೇರಿದಂತೆ ಅನೇಕ ಸಾಮಾಜಿಕ ಕಳಕಳಿಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ.

ನರೇಂದ್ರ ಮೋದಿ ದೇಶಕ್ಕೆ ಪ್ರಧಾನಿಯಾದರೂ ತಾಯಿಗೆ ಮಗ. ಹೀಗಾಗಿ ಮಾತೃಶ್ರೀ ಆಶೀರ್ವಾದ ಪಡೆದು ಅವರು ತಮ್ಮ ಜನ್ಮದಿನದ ಕಾರ್ಯಕ್ರಮಗಳನ್ನು ಆರಂಭಿಸಿದ್ದು ವಿಶೇಷವಾಗಿತ್ತು.  ನಿನ್ನೆ ರಾತ್ರಿ ತವರೂರು ಗುಜರಾತ್‍ಗೆ ಆಗಮಿಸಿದ ಅವರು ಇಂದು ಬೆಳಗ್ಗೆ ಗಾಂಧಿನಗರದ ಹೊರವಲಯದಲ್ಲಿರುವ ಬೃಂದಾವನ್ ಬಂಗಲೆಯಲ್ಲಿರುವ ತಮ್ಮ ಕಿರಿಯ ಸಹೋದರನ ನಿವಾಸಕ್ಕೆ ತೆರಳಿ 97 ವರ್ಷದ ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದರು
ಗಾಂಧಿನಗರದ ರೈಸಾನ್ ಗ್ರಾಮದಲ್ಲಿ ಮೋದಿ ಸಹೋದರ ಪಂಕಜ್ ಜೊತೆ ಹೀರಾಬೆನ್ ವಾಸವಾಗಿದ್ದಾರೆ. ತಮ್ಮ ತಾಯಿಯೊಂದಿಗೆ 20 ನಿಮಿಷಗಳ ಕಾಲ ಇದ್ದ ಮೋದಿ ನಂತರ ಆ ಬಡಾವಣೆಯಲ್ಲಿನ ಮಕ್ಕಳೊಂದಿಗೆ ಕೆಲಕಾಲ ಕಳೆದರು.

ಬಳಿಕ ಮೋದಿ ಅವರು ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಿಲು ಅಲ್ಲಿಂದ ಮುಂದಕ್ಕೆ ಪ್ರಯಾಣ ಬೆಳೆಸಿದರು.  ಜಗತ್ತಿನ ಎರಡನೇ ಬೃಹತ್ ಆಣೆಕಟ್ಟು ಸರ್ದಾರ್ ಸರೋವರ್ ಅಣೆಕಟ್ಟನ್ನು ಮೋದಿ ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮವೂ ಇದೇ ದಿನ ನಡೆದಿರುವುದು ಮತ್ತೊಂದು ವಿಶೇಷ. ಅಲ್ಲದೇ ಪ್ರಧಾನಿ ಅವರು ದಭೋಯ್ ಮತ್ತು ಅಮ್ರೇಲಿಯಲ್ಲಿ ಎರಡು ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದರು.

Facebook Comments

Sri Raghav

Admin