69 ಮಕ್ಕಳಿಗೆ ಜನ್ಮ ನೀಡಿದ 40 ವರ್ಷದ ಮಹಿಳೆ ಕೊನೆ ಹೆರಿಗೆಯಲ್ಲಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Babies--02

ನವದೆಹಲಿ, ಮಾ.4-ಅಚ್ಚರಿ ಮತ್ತು ದಿಗ್ಭ್ರಮೆ ಮೂಡಿಸುವ ಸುದ್ದಿಯೊಂದು ಮಧ್ಯಪ್ರಾಚ್ಯದ ಪ್ಯಾಲೆಸ್ತೈನ್‍ನಿಂದ ವರದಿಯಾಗಿದೆ. 69ನೇ ಮಗುವಿಗೆ ಜನ್ಮ ನೀಡಿದ ನಂತರ ಗಾಜಾದ 40 ವರ್ಷದ ಮಹಾಮಾತೆಯೊಬ್ಬಳು ಸಾವನ್ನಪ್ಪಿದ್ದಾಳೆ. ವರದಿಗಳ ಪ್ರಕಾರ, ಕುಟುಂಬ ಯೋಜನೆ ಮತ್ತು ಗರ್ಭ ನಿರೋಧಕದ ಬಗ್ಗೆ ಅರಿವು ಇರದ ಈ ಮಹಿಳೆ ಹೆರಿಗೆ ಯಂತ್ರದಂತೆ ಈವರೆಗೆ 69 ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ನಿರಂತರವಾಗಿ ಗರ್ಭ ಧರಿಸಿ ಹೆರಿಗೆಗಳಿಗೆ ಒಳಗಾಗಿದ್ದ 40 ವರ್ಷದ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದಾಳೆ. ಈಕೆ ಅತ್ಯಂತ ಫಲವಂತಿಕೆಯ ಮಹಿಳೆಯಾಗಿದ್ದಳು. 16 ಬಾರಿ ಅವಳಿ ಮಕ್ಕಳು, ಏಳು ಸಲ ತ್ರಿವಳಿ ಶಿಶುಗಳು, ಹಾಗೂ ನಾಲ್ಕು ಬಾರಿ ನಾಲ್ಕು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಳು. ಇದು ವೈದ್ಯಲೋಕಕ್ಕೆ ವಿಸ್ಮಯವಾಗಿದೆ.

ಈ ಪ್ಯಾಲೆಸ್ತೈನ್ ಮಹಿಳೆ ಬುಡಕಟ್ಟು ಕೋಮಿಗೆ ಸೇರಿದ್ದು, ಕಠಿಣ ಕಟ್ಟುಪಾಡುಗಳಿರುವ ಈ ಸಮುದಾಯದಿಂದ ಈ ಮಹಾಮಾತೆಯ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಮಕ್ಕಳಿಗೆ ಜನ್ಮ ನೀಡಿದ್ದು ಒಂದು ದಾಖಲೆ ಎನಿಸಿದರೂ ಈ ಕುರಿತು ಸೂಕ್ತ ಮಾಹಿತಿ ದೊರೆತಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin