7 ಮಂದಿ ಜೂಜುಕೋರರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

channapatana--3

ಚನ್ನಪಟ್ಟಣ, ಆ.10- ವಿವಿಧ ಜೂಜು ಅಡ್ಡೆಗಳ ಮೇಲೆ ದಾಳಿ ಮಾಡಿದ ಅಕ್ಕೂರು ಪೊಲೀಸ್ 5800 ರೂ. ವಶಪಡಿಸಿಕೊಂಡು 7 ಮಂದಿ ಜೂಜು ಕೋರರನ್ನು ಬಂಧಿಸಿರುವ ಘಟನೆ ಅಕ್ಕೂರು ಪೊಲೀಸ್ ಠಾಣೆ ವ್ಯಾಪ್ತಿಯ ಇಗ್ಗಲೂರು ಹಾಗೂ ಎಲೇತೋಟದ ಹಳ್ಳಿ ಗ್ರಾಮದಲ್ಲಿ ನಡೆದಿದೆ.ಖಚಿತ ಮಾಹಿತಿ ಪಡೆದ ಜಿಲ್ಲಾ  ಪೊಲೀಸ್   ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಡಿವೈಎಸ್‍ಪಿ ಆರ್.ಸಿ. ಲೋಕೇಶ್ ಹಾಗೂ ಗ್ರಾಮಾಂತರ ವೃತ್ತ ನಿರೀಕ್ಷಕ

ಗೋಪಿನಾಥ್ ಮಾರ್ಗದರ್ಶನದಲ್ಲಿ ಅಕ್ಕೂರು ಪೊಲೀಸ್  ಠಾಣೆಯ ಪಿಎಸ್‍ಐ ಸದಾನಂದ ಸಿಬ್ಬಂದಿಗಳಾದ ಪಾಂಡು, ಸುನೀಲ್, ಕನಕರೆಡ್ಡಿ, ರಾಜಪ, ಪಾಷಾ, ಲೋಕೇಶ್, ನಾಗೇಶ್ ದಾಳಿ ಮಾಡಿ ಬಂಧಿಸಿದ್ದಾರೆ.ಇಗ್ಗಲೂರಿನ ಸಿದ್ದ, ನಾಗರಾಜು ಹಾಗೂ ವೈ.ಟಿ.ಹಳ್ಳಿಯ ಶಿವಬೀರ , ದೊಡ್ಡೇಗೌಡ, ಪುಟ್ಟರಾಜು, ವೆಂಕಟಗಿರಿ, ಪ್ರಶಾಂತ್ ಇವರುಗಳನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.ಈ ಪ್ರಕರಣದ ಬಗ್ಗೆ ಅಕ್ಕೂರು ಪೊಲೀಸ್  ಠಾಣೆಯಲ್ಲಿ ದೂರು ದಾಖಲಾಗಿದೆ.

Facebook Comments

Sri Raghav

Admin