ಶಾಕಿಂಗ್ : ದೇಶದಲ್ಲಿ ಉದ್ಯೋಗ ಕಳೆದುಕೊಂಡ 70 ಲಕ್ಷ ಮಂದಿ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 4- ಕೋವಿಡ್ ಎರಡನೇಯ ಅಲೆಯ ಅನಾಹುತಗಳಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಳವೂ ಪ್ರಮುಖವಾಗಿದೆ. ದೇಶಾದ್ಯಂತ ಸುಮಾರು 70 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ತಿಂಗಳಿಗಿಂತಲೂ ಏಪ್ರಿಲ್ ತಿಂಗಳಿನಲ್ಲಿ ನಿರುದ್ಯೋಗದ ಪ್ರಮಾಣ ಶೇ.8ರಷ್ಟು ಏರಿಕೆಯಾಗಿದೆ. ಮಾರ್ಚ್‍ನಲ್ಲಿ ಶೇ.6.5ರಷ್ಟಿದ್ದ ನಿರುದ್ಯೋಗದ ಪ್ರಮಾಣ ಏಪ್ರಿಲ್‍ನಲ್ಲಿ ಶೇ.7.97ರಷ್ಟಾಗಿದೆ. ಸುಮಾರು 70 ಲಕ್ಷ ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಖಾಸಗಿ ಸಂಸ್ಥೆಯಾದ ಭಾರತೀಯ ಆರ್ಥಿಕ ನಿಗಾ ಕೇಂದ್ರ ತಿಳಿಸಿದೆ.

ಉದ್ಯೋಗಾವಕಾಶಗಳು ಕುಸಿದು ಹೋಗಿವೆ. ವಿವಿಧ ರಾಜ್ಯಗಳು ಜಾರಿಗೊಳಿಸಿದ ಲಾಕ್‍ಡೌನ್ ಹಾಗೂ ಇತರ ಕ್ರಮಗಳಿಂದ ಉದ್ಯೋಗ ನಷ್ಟ ಹೆಚ್ಚಳವಾಗಿದೆ ಎಂದು ತಿಳಿದು ಬಂದಿರುವುದಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್ ಹೇಳಿದ್ದಾರೆ.

ಇತ್ತೀಚೆಗೆ ಸೋಂಕಿನ ಪ್ರಮಾಣ ನಾಲ್ಕು ಲಕ್ಕಕ್ಕೆ ಹೆಚ್ಚಳವಾಗಿದೆ. ದಿನವೊಂದಕ್ಕೆ 3689 ಮಂದಿ ಸಾವನ್ನಪ್ಪುತ್ತಿದ್ದಾರೆ. ಮೇ ತಿಂಗಳ ಪರಿಸ್ಥಿತಿಯೂ ಮತ್ತಷ್ಟು ಕೆಟ್ಟದಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಕಳೆದ ವರ್ಷದ ಮಾರ್ಚ್‍ನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ಲಾಕ್‍ಡೌನ್ ಘೋಷಣೆ ಮಾಡಿದ್ದರು. ಅದರಿಂದ ಆ ವರ್ಷದ ಮೇ ತಿಂಗಳಿನಲ್ಲಿ ನಿದ್ಯೋಗದ ಪ್ರಮಾಣ ಶೇ.21ರಷ್ಟನ್ನು ದಾಟಿತ್ತು.

ಅನಂತರ ನಿಧಾನಕ್ಕೆ ಔದ್ಯೋಗಿಕ ಕ್ಷೇತ್ರ ಚೇತರಿಸಿಕೊಂಡಿತ್ತು. ರುದ್ಯೋಗದ ಪ್ರಮಾಣ ಜೂನ್ ತಿಂಗಳಿನಲ್ಲಿ ಶೇ.10ರಷ್ಟಿದ್ದರೆ, ಮುಂದಿನ ತಿಂಗಳುಗಳಲ್ಲಿ ಶೇ.8ರ ಒಳಗೆ ನಿಯಂತ್ರಣದಲ್ಲಿತ್ತು. ಡಿಸೆಂಬರ್‍ನಲ್ಲಿ ಮತ್ತೆ ಏರಿಕೆಯಾಗಿತ್ತು.

ಈ ವರ್ಷದ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಿನಲ್ಲಿ ಸುಧಾರಣಾ ಮಟ್ಟದಲ್ಲಿತ್ತು. ಆದರೆ ಏಪ್ರಿಲ್‍ನಲ್ಲಿ ಮತ್ತೆ ಏರಿಕೆಯಾಗಿದೆ. ಮೇ ತಿಂಗಳಿನಲ್ಲಿ ಕಳೆದ ವರ್ಷದಂತೆ ನಿರುದ್ಯೋಗದ ಪ್ರಮಾಣ ಶೇ.20ನ್ನು ದಾಟಿ ಬಿಡಬಹುದು ಎಂಬ ಆತಂಕ ವ್ಯಕ್ತವಾಗಿದೆ. ಉತ್ಪಾದನಾ ವಲಯದಲ್ಲಿ ನಿರಂತರವಾಗಿ ಉದ್ಯೋಗ ಕಡಿತವಾಗುತ್ತಿದೆ. ವಹಿವಾಟು ಕ್ಷೀಣಿಸಿರುವುದರಿಂದ ಬಹಳಷ್ಟು ವ್ಯಾಪಾರೋದ್ಯಮಗಳು ಮುಚ್ಚುತ್ತಿವೆ. ಸಹಜವಾಗಿಯೇ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ ಎಂದು ವರದಿ ಹೇಳಿದೆ.

Facebook Comments

Sri Raghav

Admin