7.5 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

arested
ಮಂಗಳೂರು, ಮೇ 16-ಬೆಂಗಳೂರಿನ ಬ್ಯಾಂಕ್‍ಗಳಿಗೆ ಸಾಗಿಸುತ್ತಿದ್ದ 7.5 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿದ್ದ ಮೂವರನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ.  ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕಿನ ಗರ್ವಾಲೆ ಅರಣ್ಯ ಪ್ರದೇಶದಲ್ಲಿ ಅಡಗಿದ್ದ ಮೂವರನ್ನು ಬಂಧಿಸಿರುವ ಪೊಲೀಸರು ಅವರಿಂದ ಹಣ ವಶಪಡಿಸಿಕೊಂಡಿದ್ದಾರೆ.  ಬಂಧಿತ ಮೂವರನ್ನು ಪೊಲೀಸರು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಕೊಡಗು ಪೊಲೀಸರ ನೆರವಿನಿಂದ ದಕ್ಷಿಣ ಕನ್ನಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.ಮಂಗಳೂರಿನ ಯೆಯ್ಯಾಡಿಯಲ್ಲಿರುವ ಆಕ್ಸಿಸ್ ಬ್ಯಾಂಕ್‍ನಿಂದ ಬೆಂಗಳೂರಿನ ಕೋರಮಂಗಳ ಆಕ್ಸಿಸ್ ಬ್ಯಾಂಕ್‍ಗೆ ಎಸ್‍ಐಎಸ್  ಪ್ರೊಸೆಗುರ್ ಹೋಲ್ಡಿಂಗ್ ಕಂಪೆನಿಯ ಚಾಲಕ ಚಿತ್ರದುರ್ಗ ಕರಿಬಸವ, ಮೂಲತಃ ಗದಗ್‍ನವನಾದ ಬೆಂಗಳೂರಿನ ಆನೆಪಾಳ್ಯದ ವಾಸಿ ಕಸ್ಟೋಡಿಯನ್ ಪರಶುರಾಮ ಮತ್ತು ಗನ್‍ಮ್ಯಾನ್ ಕೊಡಗು ಸೋಮವಾರ ಪೇಟೆ ಕುಂಬರಗದ್ದಿಗೆಯ ಪೂವಣ್ಣ, ಸೋಮವಾರಪೇಟೆಯ ಬಸಪ್ಪ 7.5 ಕೋಟಿ ರೂ.ಗಳನ್ನು ಸಾಗಿಸುತ್ತಿದ್ದರು. ಮಂಗಳೂರಿನಿಂದ ಹೊರಟ ವಾಹನ ಹುಣಸೂರಿನತ್ತ ತೆರಳುತ್ತಿದ್ದರು. ನಂತರ ಈ ಐದು ಮಂದಿ ಆರೋಪಿಗಳು ಹಣದ ಸಹಿತ ನಾಪತ್ತೆಯಾಗಿದ್ದರು.  ಆರೋಪಿಗಳ ಪತ್ತೆಗೆ ದಕ್ಷಿಣ ಉಪವಿಭಾಗ ಎಸಿಪಿ ಶೃತಿ ನೇತೃತ್ವದಲ್ಲಿ 16 ಮಂದಿಯ ವಿಶೇಷ ತಂಡ ರಚಿಸಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin