ಕಳ್ಳನ ಸೆರೆ, 7 ಬೈಕ್‍ಗಳ ಜಪ್ತಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.3-ಮನೆ ಮುಂಭಾಗ ನಿಲ್ಲಿಸಿದ್ದಂತಹ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಜೆಜೆನಗರ ಠಾಣೆ ಪೊಲೀಸರು ಬಂಧಿಸಿ 4 ಲಕ್ಷ ರೂ. ಬೆಲೆಯ ಏಳು ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ಜೆಜೆನಗರ ನಿವಾಸಿ ತೌಫಿಕ್ ಪಾಷ(27) ಬಂಧಿತ ಆರೋಪಿ. ಕಳೆದ ಏ.12ರಂದು ರಾತ್ರಿ ವ್ಯಕ್ತಿಯೊಬ್ಬರು ತಮ್ಮ ಮನೆ ಬಳಿ ನಿಲ್ಲಿಸಿದ್ದ ಸ್ಕೂಟರ್ ಕಳ್ಳತನವಾಗಿದ್ದ ಬಗ್ಗೆ ಜೆಜೆನಗರ ಪೊಲೀಸರಿಗೆ ದೂರು ನೀಡಿದ್ದರು.

ಇನ್‍ಸ್ಪೆಕ್ಟರ್ ಡಿ.ಸಿ.ಮಂಜು ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿ 7 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಬಂಧನದಿಂದ ಜೆಜೆನಗರ, ಕಾಟನ್‍ಪೇಟೆ, ಬ್ಯಾಟರಾಯನಪುರ, ಮಾರತಹಳ್ಳಿ, ವಿವಿಪುರಂ ಠಾಣೆಗಳಲ್ಲಿ ವರದಿಯಾಗಿದ್ದ ದ್ವಿಚಕ್ರ ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ.

Facebook Comments