ಕಾಶ್ಮೀರದ ಪೂಂಚ್ ಅರಣ್ಯ ಪ್ರದೇಶದಲ್ಲಿ ಉಗ್ರರ ಅಡಗುತಾಣ ಪತ್ತೆ, 7 ಐಎಡಿ ಸ್ಫೋಟಕಗಳ ವಶ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ನ.19- ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರ ಅಡಗುತಾಣವೊಂದನ್ನು ಪತ್ತೆಮಾಡಿರುವ ಭದ್ರತಾ ಸಿಬ್ಬಂದಿ ಏಳು ಐಎಡಿ (ಸುಧಾರಿತ ಸ್ಫೋಟಕ)ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪೂಂಚ್ ಜಿಲ್ಲೆಯ ಸುರಾನ್‍ಕೋಟ್ ಅರಣ್ಯ ಪ್ರದೇಶದ ಧರೈ ಎಂಬಲ್ಲಿ ಶಂಕಾಸ್ಪದ ವ್ಯಕ್ತಿಗಳ ಚಲನಚಲನ ಕಂಡುಬಂದಿದೆ ಎಂದು ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದರು.

ಈ ಮಾಹಿತಿ ಆಧರಿಸಿ ಯೋಧರು ಮತ್ತು ಪೊಲೀಸರ ಜಂಟಿ ತಂಡ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಸುತ್ತಿದ್ದಾಗ ಉಗ್ರರ ಅಡಗುತಾಣ ಪತ್ತೆಯಾಯಿತು. ಈ ಗೌಪ್ಯ ಸ್ಥಳದಲ್ಲಿ ಏಳು ಸುಧಾರಿತ ಸ್ಫೋಟಕಗಳು, ಒಂದು ಗ್ಯಾಸ್ ಸಿಲಿಂಡರ್ ಮತ್ತು ಒಂದು ವೈರ್‍ಲೆಸ್ ಸೆಟ್ ಪತ್ತೆಯಾಗಿದೆ.

ಈ ಸ್ಥಳವನ್ನು ಭದ್ರತಾ ಸಿಬ್ಬಂದಿ ತಲುಪುವುದಕ್ಕೆ ಮುನ್ನ ಉಗ್ರರು ಅಲ್ಲಿಂದ ಪರಾರಿಯಾಗಿದ್ದಾರೆ. ಭಯೋತ್ಪಾದಕರಿಗಾಗಿ ಸುತ್ತಮುತ್ತಲ ಅರಣ್ಯ ಪ್ರದೇಶದಲ್ಲಿ ತೀವ್ರ ಶೋಧ ನಡೆಯುತ್ತಿದೆ.

Facebook Comments