ಆಗಸದಲ್ಲೇ 2 ವಿಮಾನಗಳ ಡಿಕ್ಕಿ, ಸಂಸದ ಸೇರಿ 7 ಮಂದಿ ದುರ್ಮರಣ..!

ಈ ಸುದ್ದಿಯನ್ನು ಶೇರ್ ಮಾಡಿ

ಆಂಕೋರೇಜ್, ಆಲಾಸ್ಕ, ಆ.1-ಆಗಸದಲ್ಲಿ ಎರಡು ವಿಮಾನಗಳ ನಡುವೆ ಡಿಕ್ಕಿಯಾಗಿ ಸಂಸದರೊಬ್ಬರೂ ಸೇರಿದಂತೆ ಏಳು ಮಂದಿ ಸಾವಿಗೀಡಾದ ದುರಂತ ಅಮೆರಿಕದ ಅಲಾಸ್ಕದ ಅಂಕರೋರೇಜ್‍ನಲ್ಲಿ ಸಂಭವಿಸಿದೆ.

ಈ ಎರಡು ವಿಮಾನಗಳಲ್ಲಿದ್ದ ಯಾರೊಬ್ಬರೂ ಬದುಕುಳಿದಿಲ್ಲ ಎಂದು ರಕ್ಷಣಾ ಕಾರ್ಯಾಚರಣೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆನೈ ಪರ್ಯಾಯ ದ್ವೀಪದ ಸಾಲ್ಡೋಟ್ನಾ ವಿಮಾನ ನಿಲ್ದಾಣದ ಬಳಿ ಈ ದುರ್ಘಟನೆ ಸಂಭವಿಸಿದೆ.

ಒಂದು ಲಘು ವಿಮಾನವನ್ನು ಚಾಲನೆ ಮಾಡುತ್ತಿದ್ದ ಸಾಲ್ಡೋಟ್ನಾ ನಗರದ ಸಂಸದ ಮತ್ತು ರಿಪಬ್ಲಿಕನ್ ಪಕ್ಷದ ಮುಖಂಡ ಗ್ಯಾರಿ ನೋಪ್ ಸಹ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ಧಾರೆ. ಮತ್ತೊಂದು ವಿಮಾನದಲ್ಲಿದ್ದ ಎಲ್ಲ ಆರು ಜನರೂ ಸಹ ಅಸುನೀಗಿದ್ದಾರೆ.

ಮತ್ತೊಂದು ವಿಮಾನದಲ್ಲಿ ನಾಲ್ವರು ಪ್ರವಾಸಿಗರು, ಒಬ್ಬ ಮಾರ್ಗದರ್ಶಿ ಮತ್ತು ಪೈಟಟ್ ಇದ್ದರು. ಇವರು ದಕ್ಷಿಣ ಕರೋಲಿನಾದಿಂದ ವಿಮಾನದಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದರು.

ಆಗಸದಲ್ಲಿ ಎರಡು ವಿಮಾನಗಳು ಡಿಕ್ಕಿಯಾದ ನಂತರ ಆವಶೇಷಗಳು ರಸ್ತೆಗಳ ಮೇಲೆ ಬಿದ್ದ ಪರಿಣಾಮ ಕೆಲವು ಗಂಟೆಗಳ ಕಾಲ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು.

Facebook Comments

Sri Raghav

Admin