7 ತಿಂಗಳ ಮಗುವಿನ ಹೊಟ್ಟೆಯಲ್ಲಿದ್ದ ಗಡ್ಡೆ ಹೊರತೆಗೆದ ವೈದ್ಯರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.13- ಏಳು ತಿಂಗಳ ಗಂಡು ಮಗುವಿನ ಹೊಟ್ಟೆಯಲ್ಲಿದ್ದ ಭ್ರೂಣದಂತಹ ಗಡ್ಡೆಯನ್ನು ಹೊರ ತೆಗೆ ಯುವಲ್ಲಿ ಕೋರಮಂಗಲದ ಮಣಿಪಾಲ್ ಆಸ್ಪತ್ರೆ ಯಶಸ್ವಿ ಯಾಗಿದೆ.

ಸುದ್ದಿಗೋಷ್ಠಿಯಲ್ಲಿ ಆಸ್ಪತ್ರೆಯ ಸಲಹಾ ತಜ್ಞ ರಾಧಾಕೃಷ್ಣ ಮಾತನಾಡಿ, ಶಿಶು ಅಬೀರ್ ಹೊಟ್ಟೆಯ ಭಾಗದಲ್ಲಿ ದೊಡ್ಡ ಊತ ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿಸಲಾಯಿತು. ನಂತರ ವೈದ್ಯರು ಮಗುವಿನ ಹೊಟ್ಟೆಯಲ್ಲಿ ಗಡ್ಡೆಯಿರುವುದು ಪತ್ತೆಯಾಯಿತು.

ಶಿಶುವಿಗೆ ಬಹಳ ದೊಡ್ಡ ಗಾತ್ರದ ಗಡ್ಡೆ ಇದ್ದು ಇದು ಹೊಟ್ಟೆಯ ಹಿಂಭಾಗದ ಗೋಡೆಯಿಂದ ಆರಂಭವಾಗಿ ಮುಂಭಾಗದ ಕಡೆಗೆ ಹರಡಿತ್ತು. ಹೊಟ್ಟೆಯ ಒಳಗೆ ದ್ರವ ಮತ್ತು ಘನ ಪದಾರ್ಥಗಳಿಂದ ಕೂಡಿದ್ದನ್ನು ಕಂಡು ಬೆರಗಾದೆವು.  ಹೊಟ್ಟೆಯು ಪ್ಯಾಂಕ್ರಿಯಾ ಮತ್ತು ಕರುಳಿಗೆ ರಕ್ತ ಪೂರೈಸುವ ರಕ್ತನಾಳಗಳು ಕೂಡ ಸ್ಥಳ ಪಲ್ಲಟಗೊಂಡಿದ್ದು ಶಿಶುವಿನಲ್ಲಿರುವ ಈ ಗಡ್ಡೆಗಳು ಹತ್ತಿರವಾಗಿದ್ದವು.

ದೇಹದ ಇತರೆ ಅಂಗಗಳಿಂದ ಗಡ್ಡೆಯನ್ನು ಬೇರ್ಪಡಿಸಿ ಬಹಳ ಎಚ್ಚರಿಕೆಯಿಂದ ಮತ್ತು ಸೂಕ್ಷ್ಮವಾಗಿ ಗಮನಿಸಿ ಕತ್ತರಿಸಲಾಯಿತು.ಎಚ್ಚರಿಕೆಯಿಂದ ಸೂಕ್ಷ್ಮವಾಗಿ ಪರೀಕ್ಷೆ ನಡೆಸಿದಾಗ ಕೆಲವು ಮಾದರಿಯಲ್ಲಿ ಕೆಲವು ವಿರಳವಾದ ಅಂಶಗಳು ಪತ್ತೆಯಾದವು.

ನಂತರ ಮಗುವಿಗೆ ಸ್ಕಾನ್ ಮಾಡಿ ಶಸ್ತ್ರ ಚಿಕಿತ್ಸೆ ನಡೆಸಿ ಶಿಶುವಿನಲ್ಲಿರುವ ಭ್ರೂಣದಂತಹ ಗಡ್ಡೆಯನ್ನು ಯಶಸ್ವಿಯಾಗಿ ಹೊರತೆಗೆದೆವು. ಈಗ ಮಗು ಎಲ್ಲಾ ಮಕ್ಕಳಂತೆ ಲವಲವಿಕೆಯಿಂದ ಇದೆ ಎಂದು ಹೇಳಿದರು.

Facebook Comments