ಭಾರತದ 7 ರಾಜ್ಯಗಳು ಮತ್ತು 10 ನಗರಗಳಿಗೆ ಕೊರೋನಾ ಗಂಡಾಂತರ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.12-ಕೊರೊನಾಘಾತದಿಂದ ತತ್ತರಿಸುತ್ತಿರುವ ಭಾರತಕ್ಕೆ ಕಿಲ್ಲರ್ ವೈರಸ್ ಪೆಡಂಭೂತವಾಗಿ ಪರಿಣಮಿಸಿದೆ. ಈಗಾಗಲೇ ಸೋಂಕಿತರ ಸಂಖ್ಯೆ 3 ಲಕ್ಷ ಸನಿಹದಲ್ಲಿದ್ದು, 8,500ಕ್ಕೂ ಹೆಚ್ಚು ಮಂದಿಯನ್ನು ಹೆಮ್ಮಾರಿ ಬಲಿ ಪಡೆದಿದೆ.

ಹೊಸ ಅಂಕಿ ಅಂಶಗಳ ಪ್ರಕಾರ ಏಳು ರಾಜ್ಯಗಳು ಮತ್ತು 10 ನಗರಗಳು ಕೊರೊನಾ ದಾಳಿಯಿಂದ ತೀವ್ರ ಅಪಾಯಕ್ಕೆ ಸಿಲುಕಿದ್ದು, ಸೋಂಕು ಮತ್ತು ಸಾವಿನ ಸಂಖ್ಯೆ ಆಘಾತಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ.

ಹೊಸ ಅಂಕಿಅಂಶಗಳ ಪ್ರಕಾರ ದೇಶದ ಏಳು ರಾಜ್ಯಗಳು ಮತ್ತು 10 ನಗರಗಳು ಕೊರೊನಾ ಮಹಾಮಾರಿಯ ಭಾರೀ ಕಂಟಕಕ್ಕೆ ಒಳಗಾಗಿದೆ.  ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ಹರಿಯಾಣ, ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರ ಹಾಗೂ ಉತ್ತರಪ್ರದೇಶ ವೈರಾಣು ವಜ್ರಮುಷ್ಠಿಯಲ್ಲಿ ನಲುಗುತ್ತಿವೆ.  ಸೋಂಕು ಪೀಡಿತ ರಾಜ್ಯಗಳಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ.

ಈ ರಾಜ್ಯದಲ್ಲಿ ಸಾಂಕ್ರಾಮಿಕ ರೋಗಿಗಳ ಸಂಖ್ಯೆ 1 ಲಕ್ಷ ಸನಿಹದಲ್ಲಿದೆ. ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 3,590 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 97,648ಕ್ಕೇರಿದೆ. ರಾಜ್ಯದಲ್ಲಿ ಈವರೆಗೆ 46,078 ಮಂದಿ ಚೇತರಿಸಿಕೊಂಡಿದ್ದಾರೆ.

ಸೋಂಕು ಪ್ರಕರಣದಲ್ಲಿ 2ನೇ ಸ್ಥಾನದಲ್ಲಿರುವ ತಮಿಳುನಾಡು ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ ಪಾಸಿಟಿವ್ ಕೇಸ್ 38,716ಕ್ಕೇರಿದೆ. ಈ ರಾಜ್ಯದಲ್ಲಿ ಈವರೆಗೆ 350 ಮಂದಿ ಮೃತಪಟ್ಟಿದ್ದಾರೆ. ಸಾಂಕ್ರಾಮಿಕ ರೋಗಿಗಳಲ್ಲಿ 20,750 ಮಂದಿ ಗುಣಮುಖರಾಗಿದ್ದಾರೆ.

ರಾಜಧಾನಿ ನವದೆಹಲಿಯಲ್ಲಿಯೂ ಪರಿಸ್ಥಿತಿ ಶೋಚನೀಯವಾಗಿದೆ. ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 34,687ಕ್ಕೇರಿದೆ. ರಾಜಧಾನಿಯಲ್ಲಿ ಈವರೆಗೆ 1,085 ಮಂದಿ ಸಾವಿಗೀಡಾಗಿದ್ದು, ಪಾಸಿಟಿವ್ ಕೇಸ್‍ಗಳಲ್ಲಿ 12,731 ರೋಗಿಗಳು ಚೇತರಿಸಿಕೊಂಡಿದ್ಧಾರೆ.

ಗುಜರಾತ್‍ನಲ್ಲೂ ದಿನೇ ದಿನೇ ಸೋಂಕು ಮತ್ತು ಸಾವು ಪ್ರಕರಣಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ರಾಜ್ಯದಲ್ಲಿ 22,032 ಕೋವಿಡ್-19 ವೈರಸ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ 1,385 ಮಂದಿ ಅಸುನೀಗಿದ್ದು, 15,101 ರೋಗಿಗಳು ಗುಣಮುಖರಾಗಿದ್ದಾರೆ.

ಇತರ ರಾಜ್ಯಗಳು : ರಾಜಸ್ತಾನದಲ್ಲಿ 11,838 ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ 265 ಮಂದಿ ಮೃತಪಟ್ಟಿದ್ದಾರೆ. ಚೇತರಿಸಿಕೊಂಡ ರೋಗಿಗಳ ಸಂಖ್ಯೆ 8,775.

ಮಧ್ಯಪ್ರದೇಶದಲ್ಲಿ ಕೋವಿಡ್-19 ಟ್ಯಾಲಿಯಲ್ಲಿ ಸೋಂಕು 10,241 ದಾಟಿದೆ, ಉತ್ತರ ಪ್ರದೇಶದಲ್ಲಿ 12,088 ಮೀರಿದ್ದರೆ, ಪಶ್ಚಿಮ ಬಂಗಾಳದಲ್ಲಿ ಸಓಂಕಿತರ ಸಂಖ್ಯೆ 10,000 ಸನಿಹದಲ್ಲಿದೆ. ಬಿಹಾರ, ಆಂಧ್ರಪ್ರದೇಶದಲ್ಲಿ ಅನುಕ್ರಮವಾಗಿ 5,983 ಮತ್ತು 5,429 ಮಂದಿ ರೋಗಿಗಳು ನರಳುತ್ತಿದ್ದಾರೆ. ಕರ್ನಾಟಕದಲ್ಲಿ ಸೋಂಕು ಪೀಡಿತರ ಸಂಖ್ಯೆ 6,245ಕ್ಕೇರಿದೆ.

ಲಂಗಾಣದಲ್ಲಿ 4,320, ಜಮ್ಮು-ಕಾಶ್ಮೀರದಲ್ಲಿ ಪಾಸಿಟಿವ್ ಪ್ರಕರಣ 4,500 ದಾಟಿದೆ. ಹರಿಯಾಣ ಮತ್ತು ಅಸ್ಸಾಂನಲ್ಲಿ ಅನುಕ್ರಮವಾಗಿ 6,000 ಮತ್ತು 3,000 ಮೀರಿದೆ.ಪಂಜಾಬ್, ಉತ್ತರಾಖಂಡ, ಕೇರಳ, ಜಾರ್ಖಂಡ್, ಮತ್ತು ತ್ರಿಪುರ ರಾಜ್ಯಗಳಲ್ಲಿಯೂ ಸೋಂಕಿತರ ಸಂಖ್ಯೆ 3,000 ಮೀರಿರುವುದು ಅತಂಕಕಾರಿಯಾಗಿದೆ.

Facebook Comments