70ರ ದಶಕದಲ್ಲಿ ಪಡ್ಡೆಗಳ ನಿದ್ದೆಗೆಡಿಸಿದ್ದ ಬಹುಭಾಷಾ ಚಿತ್ರನಟಿ ಜ್ಯೋತಿಲಕ್ಷ್ಮಿ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Jyothi-Lakshm

ಬೆಂಗಳೂರು, ಆ.9-ಎಪ್ಪತ್ತರ ದಶಕದ ಮಡಿವಂತಿಕೆ ಕಾಲದಲ್ಲಿ ಮೈ ಚಳಿ ಬಿಟ್ಟು ಚಲನಚಿತ್ರಗಳಲ್ಲಿ ನಟಿಸುತ್ತಿದ್ದ ಬಹುಭಾಷಾ ಚಿತ್ರನಟಿ ಜ್ಯೋತಿಲಕ್ಷ್ಮಿ ಸಾವನ್ನಪ್ಪಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಿ ಸೇರಿದಂತೆ 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ತಮ್ಮ ನೃತ್ಯದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದ ಜ್ಯೋತಿಲಕ್ಷ್ಮಿಯವರು ಅನಾರೋಗ್ಯದಿಂದ ಇಂದು ಚೆನ್ನೈನಲ್ಲಿ ನಿಧನರಾಗಿದ್ದಾರೆ.  ನಂ.1 ಕ್ಯಾಬರೆ ಡ್ಯಾನ್ಸರ್ ಜಯಮಾಲಿನಿ ಅವರ ಸಹೋದರಿ ಜ್ಯೋತಿಲಕ್ಷ್ಮಿಯವರು ಕುಳ್ಳ ಏಜೆಂಟ್ 000, ಬೆಂಗಳೂರು ಮೇಲ್, ಪ್ರತಿಧ್ವನಿ, ಚಲ್ಲಿದ ರಕ್ತ, ರಕ್ತ ಕಣ್ಣೀರು, ವಿಜಯದಶಮಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದರು.

ಕುಳ್ಳ ಏಜೆಂಟ್ 000 ಚಿತ್ರದಲ್ಲಿ ಹೀರೋಯಿನ್ ಆಗಿ ಕೂಡ ಜ್ಯೋತಿಲಕ್ಷ್ಮಿ ನಟಿಸಿದ್ದರು. ಕ್ಯಾಬರೆ ಡ್ಯಾನ್ಸರ್ ಹಾಗೂ ವಿಲನ್ ಪಾತ್ರದಲ್ಲೂ ಜ್ಯೋತಿಲಕ್ಷ್ಮಿ ಮಿಂಚಿದ್ದರು.  ಜ್ಯೋತಿಲಕ್ಷ್ಮಿ ನೃತ್ಯವಿಲ್ಲದೆ ಯಾವುದೇ ಚಲನಚಿತ್ರ ಯಶಸ್ವಿ ಇಲ್ಲ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಎಲ್ಲ ಚಿತ್ರಗಳಲ್ಲೂ ಜ್ಯೋತಿಲಕ್ಷ್ಮಿಯವರ ನೃತ್ಯವಿರುತ್ತಿತ್ತು. ನಂತರ ಅವರ ಪಾತ್ರವಿರುತ್ತಿತ್ತು. ಬರಬರುತ್ತ ನಾಯಕ ನಟಿಯಾಗಿಯೂ ಕೂಡ ಪಾತ್ರ ನಿರ್ವಹಿಸುತ್ತಿದ್ದರು.

ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚೆನ್ನೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ನಿಧನರಾಗಿದ್ದಾರೆ.  ಜ್ಯೋತಿಲಕ್ಷ್ಮಿ ಅವರ ನಿಧನಕ್ಕೆ ಚಲನಚಿತ್ರ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ. ಚಿತ್ರರಂಗದ ಗಣ್ಯರಾದ ರಜನಿಕಾಂತ್, ಚಿರಂಜೀವಿ ಸೇರಿದಂತೆ ತಮಿಳು, ತೆಲುಗು ಚಿತ್ರರಂಗದ ದಿಗ್ಗಜರು ಕಂಬನಿ ಮಿಡಿದಿದ್ದಾರೆ.   ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಲನಚಿತ್ರ ನಟ-ನಟಿಯರು ಸೇರಿದಂತೆ ಅನೇಕ ಗಣ್ಯರು ಶೋಕ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin