70 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಹೆಡ್‍ಕಾನ್‍ಸ್ಟೆಬಲ್

ಈ ಸುದ್ದಿಯನ್ನು ಶೇರ್ ಮಾಡಿ

ACB--01

ಬೆಂಗಳೂರು, ಮಾ.24-ದೂರು ಸಂಬಂಧ ಕ್ರಮಕೈಗೊಳ್ಳಲು 70 ಸಾವಿರ ರೂ. ಲಂಚ ಪಡೆಯುತ್ತಿದ್ದ ಎಚ್‍ಎಎಲ್ ಠಾಣೆಯ ಹೆಡ್‍ಕಾನ್‍ಸ್ಟೆಬಲ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಮಂಜುನಾಥ ಆಚಾರಿ ಎಸಿಬಿ ಬಲೆಗೆ ಬಿದ್ದ ಎಚ್‍ಎಎಲ್ ಠಾಣೆಯ ಹೆಡ್‍ಕಾನ್‍ಸ್ಟೆಬಲ್. ಅನ್ನಸಂದ್ರ ಪಾಳ್ಯದ ವಿಭೂತಿಪುರದಲ್ಲಿನ ಮನೆಯನ್ನು ರಾಮಮೋಹನ್ ಎಂಬುವರ ತಂದೆಯ ಆರೋಗ್ಯ ಸರಿಯಿಲ್ಲದ ಕಾರಣ ಈತನ ತಂಗಿ ದಾನ ಪತ್ರ ಮಾಡಿಸಿಕೊಂಡಿದ್ದಾರೆ.   ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದ ರಾಮಮೋಹನ್ ಪರ ತೀರ್ಪು ಬಂದಿದ್ದರೂ ತಂಗಿ ಮನೆಯಲ್ಲಿ ಅತಿಕ್ರಮ ಪ್ರವೇಶ ಮಾಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಮಮೋಹನ್ ಎಚ್‍ಎಎಲ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸಂಬಂಧ ಕ್ರಮಕೈಗೊಳ್ಳಲು 1 ಲಕ್ಷ ರೂ. ಲಂಚ ನೀಡುವಂತೆ ಹೆಡ್‍ಕಾನ್‍ಸ್ಟೆಬಲ್ ಬೇಡಿಕೆಯಿಟ್ಟಿದ್ದಾರೆ. ಈ ಬಗ್ಗೆ ಎಸಿಬಿಗೆ ದೂರು ನೀಡಿದ ರಾಮಮೋಹನ್ ಅವರು ನಿನ್ನೆ 70 ಸಾವಿರ ರೂ. ಲಂಚ ನೀಡುವಾಗ ಎಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಎಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಡ್‍ಕಾನ್‍ಸ್ಟೆಬಲ್‍ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin