ಮೋದಿ ಹುಟ್ಟುಹಬ್ಬಕ್ಕೆ ರೆಡಿಯಾಯ್ತು 70 ಕೆ.ಜಿ ಲಡ್ಡು..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಸೆ.17-ಜಗತ್ತಿನ ಅತ್ಯಂತ ಪ್ರಭಾವಿ ನಾಯಕರೂಆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇಂದು 70ನೇ ಜನ್ಮದಿನದ ಸಂಭ್ರಮ.  ಬಿಜೆಪಿ ನಾಯಕರು ಮತ್ತುಕಾರ್ಯಕರ್ತರು ದೇಶಾದ್ಯಂತ ಇಂದು ಮೋದಿ ಅವರ ಹುಟ್ಟು ಹಬ್ಬವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಅನೇಕ ರಾಜ್ಯಗಳಲ್ಲಿ ಪ್ರಧಾನಿ ಬಿ-ಡೇ ಪ್ರಯುಕ್ತ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, 70 ಕೆ.ಜಿ. ಲಾಡು ನಿರ್ಮಾಣ ಮತ್ತು ವಿತರಣೆ, ಕೇಕ್‍ಗಳನ್ನು ಕತ್ತರಿಸುವಿಕೆ, ಸಸಿಗಳನ್ನು ನೆಡುವಿಕೆ, ರಕ್ತದಾನ ಶಿಬಿರ, ಆರೋಗ್ಯತಪಾಸಣೆ ಶಿಬಿರ, ನೇತ್ರದಾನ ಶಿಬಿರ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳ ವಿತರಣೆ, ಬಡವರಿಗೆ ಅಗತ್ಯ ವಸ್ತುಗಳ ಪೂರೈಕೆ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿವೆ.

ದೇಶದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಮೋದಿ ಅವರ ಅದ್ದೂರಿ ಜನ್ಮದಿನ ಆಚರಣೆ ಮಂಕಾಗಿದ್ದರೂ, ಬಿಜೆಪಿ ಕಾರ್ಯಕರ್ತರ ಉತ್ಸಾಹಕ್ಕೆ ಭಂಗವಾಗಿಲ್ಲ.  ರಾಜಧಾನಿ ದೆಹಲಿ, ಮೋದಿ ಅವರತವರೂರು ಗುಜರಾತ್, ಪ್ರಧಾನಿ ಪ್ರತಿನಿಧಿಸಿರುವ ವಾರಾಣಸಿ ಸೇರಿದಂತೆ ವಿವಿಧ ನಗರಗಳಲ್ಲಿ ಬಿಜೆಪಿ ಕಾರ್ಯದರ್ತರು ಮೋದಿ ಅವರ ಜನ್ಮದಿನವನ್ನು ವಿಶೇಷ ರೀತಿಯಲ್ಲಿ ಅಚರಿಸುತ್ತಿದ್ದಾರೆ. ಈ ನಗರಗಳಲ್ಲಿ ಪ್ರಧಾನಿ ಅವರ ಭಾವಚಿತ್ರಗಳ ಮತ್ತು ಬಿಜೆಪಿ ಕೇಸರಿ ಧ್ವಜಗಳು ರಾರಾಜಿಸುತ್ತಿವೆ.

ಮೋದಿ ಅವರಜನ್ಮ ದಿನದ ಪ್ರಯುಕ್ತದೇಶದ ಅನೇಕ ನಗರಗಳ ದೇಗುಲಗಳಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮೋದಿ ಅವರ ಹೆಸರಿನಲ್ಲಿ ವಿಶೇಷ ಪೂಜೆ ನೆರವೇರಿಸಿ ಸಿಹಿ ವಿತರಿಸಿ ಸಂಭ್ರಮಿಸಿದ್ದಾರೆ. ದೇಶಾದ್ಯಂತ ಇಂದು ಸಂಜೆಯೂ ಕೂಡ ವಿಶೇಷ ಕಾರ್ಯಕ್ರಮಗಳು ಏರ್ಪಾಡಾಗಿವೆ.

Facebook Comments