700 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಹರ್ಷದ್ ಮೆಹ್ತಾ ಸಹೋದರನಿಗೆ ಶಿಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Sudheer-Mehtaa

ಮುಂಬೈ, ನ.29-ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಭಾರೀ ಹೊಡೆದ ನೀಡಿದ್ದ 1992ರ ಬಹುಕೋಟಿ ರೂಪಾಯಿಗಳ ಷೇರು ಹಗರಣ ಬೆಳಕಿಗೆ ಬಂದ ನಂತರ, ಇಲ್ಲಿನ ವಿಶೇಷ ನ್ಯಾಯಾಲಯವೊಂದು 700 ಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ಮಹಾ ಕುತಂತ್ರಿ ಹರ್ಷದ್ ಮೆಹ್ತಾ ಸಹೋದರ ಸುಧೀರ ಮೆಹ್ತಾ ಹಾಗೂ ಬ್ಯಾಂಕ್ ಅಧಿಕಾರಿಗಳು ಮತ್ತು ಷೇರು ದಲ್ಲಾಳಿಗಳು ಸೇರಿದಂತೆ ಐವರನ್ನು ತಪ್ಪಿತಸ್ಥರೆಂದು ಘೋಷಿಸಿದೆ.  ನ್ಯಾಷನಲ್ ಹೌಸಿಂಗ್ ಬ್ಯಾಂಕ್‍ಗೆ 700ಕೋಟಿ ರೂ.ಗಳಿಗೂ ಹೆಚ್ಚು ಹಣಕ್ಕೆ ಪಂಗನಾಮ ಹಾಕಿದ ಪ್ರಕರಣದಲ್ಲಿ ಮೆಹ್ತಾ ಸೇರಿದಂತೆ ಆರು ಮಂದಿಯನ್ನು ನ್ಯಾಯಾಲಯವು ಶಿಕ್ಷೆಗೆ ಗುರಿಪಡಿಸಲಿದೆ. ಶಿಕ್ಷೆಯ ಪ್ರಮಾಣದ ತೀರ್ಪನ್ನು ಕಾದಿರಿಸಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹರ್ಷದ್ ಮೆಹ್ತಾ 2002ರಲ್ಲಿ ಮೃತಪಟ್ಟಿದ್ದಾನೆ.

ಈ ಪ್ರಕರಣದ ಸುದೀರ್ಘ ವಿಚಾರಣೆ ಮತ್ತು ಕಾನೂನು ಸಂಘರ್ಷದಲ್ಲಿ ತಾವು ಕಳೆದ ಎರಡು ದಶಕಗಳಿಂದ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಝರ್ಜರಿತವಾಗಿದ್ದೇವೆ. ತಮ್ಮ ಆರೋಗ್ಯ ಹದಗೆಟ್ಟಿದೆ. ಆದ್ದರಿಂದ ತಮ್ಮ ಮೇಲೆ ದಯೆ ತೋರಬೇಕೆಂದು ಆರೋಪಿಗಳ ಮನವಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಶಾಲಿನಿ ಫನ್‍ಸಲ್ಕರ್ ಜೋಷಿ ತಿರಸ್ಕರಿಸಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin