ಸೇನಾ ಶಿಬಿರದ ಮೇಲೆ ಉಗ್ರರ ದಾಳಿ, 71 ಯೋಧರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

ನಿಯಮ (ಮಾಲೆ), ಡಿ.12- ಮಾಲೆ ಮತ್ತು ನೈಜೀರಿಯಾ ಗಡಿ ಭಾಗದಲ್ಲಿನ ಸೇನಾ ಶಿಬಿರವೊಂದರ ಮೇಲೆ ಭಯೋತ್ಪಾದಕರು ನಡೆಸಿದ ಭೀಕರ ದಾಳಿಯಲ್ಲಿ 70ಕ್ಕೂ ಹೆಚ್ಚು ಯೋಧರು ಹತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ. ನೈಜೀರಿಯಾ ಸೇನಾ ನೆಲೆಯನ್ನು ಗುರಿಯಾಗಿಟ್ಟುಕೊಂಡು ಭಾರೀ ಸಂಖ್ಯೆಯಲ್ಲಿದ್ದ ಶಸ್ತ್ರ ಸಜ್ಜಿತ ಉಗ್ರರು ಹಠಾತ್ ದಾಳಿ ನಡೆಸಿದರು.

ಬಾಂಬ್‍ಗಳು, ಶೆಲ್‍ಗಳು, ಮಾರ್ಟರ್‍ಗಳು ಮತ್ತು ಅತ್ಯಾಧುನಿಕ ರೈಫಲ್‍ಗಳಿಂದ ಭಯೋತ್ಪಾದಕರು ದಾಳಿ ನಡೆಸಿ 71 ಯೋಧರನ್ನು ಕೊಂದಿದ್ದಾರೆ. ಈ ಘಟನೆಯಲ್ಲಿ ಅನೇಕ ಸೈನಿಕರಿಗೆ ಗಾಯಗಳಾಗಿವೆ ಎಂದು ಮಿಲಿಟರಿ ತಿಳಿಸಿದೆ. ಹತರಾದವರು ಮತ್ತು ಗಾಯಗೊಂಡವರಲ್ಲಿ ಸೇನಾ ಅಧಿಕಾರಿಗಳೂ ಸೇರಿದ್ದಾರೆ.

ಉಗ್ರರ ದಾಳಿಗೆ ಯೋಧರು ತಿರುಗೇಟು ನೀಡಿದ್ದು, ಕೆಲವು ಭಯೋತ್ಪಾದಕರು ಸಹ ಹತರಾಗಿದ್ದಾರೆ. ಗಾಯಾಳು ಸೈನಿಕರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಕೆಲವರ ಸ್ಥಿತಿ ಶೋಚನೀಯವಾಗಿದೆ.

Facebook Comments