ಕೊರೊನಾ ಆತಂಕ ನಡುವೆಯೂ 72ನೇ ಗಣರಾಜ್ಯೋತ್ಸವ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಜ.26- ಕೊರೊನಾ ಹಾಗೂ ಇತರೆ ಆತಂಕಗಳ ನಡುವೆಯೂ ನಡೆದ 72ನೇ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಕಿಂಚಿತ್ತೂ ಕೊರತೆಗಳು ಕಂಡುಬರಲಿಲ್ಲ. ಎಂದಿನಂತೆ ಸೇನೆ ತನ್ನ ಶಕ್ತಿ ಸಾಮಥ್ರ್ಯಗಳನ್ನು ಸಮರ್ಥಿಸಿದರೆ, ವಿವಿಧ ರಾಜ್ಯಗಳ ವೈವಿದ್ಯಮಯ ಸಂಸ್ಕøತಿ ಕಲೆಗಳು ಜಗತ್ತಿನ ಮುಂದೆ ಅನಾವರಣಗೊಂಡವು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್ ಬಳಿ ಇರುವ ಯೋಧರ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸುವ ಮೂಲಕ ಗಣರಾಜ್ಯೋತ್ಸವಕ್ಕೆ ಚಾಲನೆ ನೀಡಿದರು. ಸಂಪ್ರದಾಯದಂತೆ 21 ಗನ್ ಸೆಲ್ಯೂಟ್‍ಗಳ ನಡುವೆ ರಾಷ್ಟ್ರ ಧ್ವಜಾರೋಹಣ ನೆರವೇರಿತು.

ಅನಂತರ ಆರಂಭಗೊಂಡ ಪರೇಡ್‍ನಲ್ಲಿ 17 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 32 ಟ್ಯಾಬ್ಲೊಗಳು ಪರೇಡ್‍ನಲ್ಲಿ ಭಾಗವಹಿಸಿದ್ದವು. ಕೇಂದ್ರ ರಕ್ಷಣಾ ಸಚಿವಾಲಯದ 6, ಕೇಂದ್ರ ಸಚಿವಾಲಯಗಳು ಮತ್ತು ಅರೆಸೇನಾಪಡೆಯ 9, ರಾಷ್ಟ್ರ, ಸಂಸ್ಕøತಿ, ಪರಂಪರೆ, ಆರ್ಥಿಕತೆಯನ್ನು ಬಿಂಬಿಸುವ ಟ್ಯಾಬ್ಲೊಗಳು ಹೆಮ್ಮೆಯಿಂದ ಪರೇಡ್‍ನಲ್ಲಿ ಸಾಗಿದವು. ಬಾಂಗ್ಲಾದೇಶದ 122ಮಂದಿಯ ಸೇನಾ ದಳ ಪರೇಡ್‍ನಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

1971ರಲ್ಲಿ ಪಾಕ್ ಮೇಲಿನ ಯುದ್ಧದಿಂದ ಬಾಂಗ್ಲಾದೇಶವನ್ನು ಪ್ರತ್ಯೇಕಗೊಳಿಸಿದ ಸುವರ್ಣಮಹೋತ್ಸವವನ್ನು ಉಭಯ ದೇಶಗಳು ಆಚರಿಸುತ್ತಿವೆ. ಭಾರತೀಯ ನೌಕಾದಳ ವಿಕ್ರಾಂತ್ ಮತ್ತು ನಾವಲ್‍ನ ಟ್ಯಾಬ್ಲೊಗಳನ್ನು ಪ್ರದರ್ಶನ ಮಾಡಿತು. ಭಾರತೀಯ ವಾಯುದಳ ತೇಜಸ್ ಮತ್ತು ಟ್ಯಾಂಕರ್‍ಗಳನ್ನು ಪ್ರತಿರೋಧಿಸು ಮಿಸೈಲ್‍ಗಳ ಪ್ರತಿಕೃತಿಗಳನ್ನು ಪ್ರದರ್ಶಿಸಲಾಯಿತು.

ದೇಶದ ಹೆಮ್ಮೆಯ ರಫೇಲ್ ಯುದ್ಧ ವಿಮಾನದ ಚಾಕಚಕ್ಯತೆ ಕೂಡ ಪ್ರದರ್ಶನಗೊಂಡಿತು. 900 ಕಿ.ಮೀ. ವೇಗದಲ್ಲಿ ಶಬ್ಧದ ವೇಗವನ್ನೂ ಸೀಳಿ ಸಂಚರಿಸಿದ ರಫೇಲ್ ನೋಡುಗರ ಗಮನ ಸೆಳೆಯಿತು.  ಸುಖೋಯ್, ತ್ರಿಶೂಲ್ ಸೇರಿದಂತೆ ತ್ರಿನೇತ್ರ ಯುದ್ಧ ವಿಮಾನಗಳು ತಮ್ಮ ಸಾಮಥ್ರ್ಯವನ್ನು ಪ್ರದರ್ಶನ ಮಾಡಿದವು. ರುದ್ರ ಹೆಲಿಕಾಪ್ಟರ್, ಏಕಲವ್ಯ ಯುದ್ಧವಿಮಾನ, ಮಿಗ್ 29, ಜಾಗ್ವರ್ ಸೇರಿದಂತೆ ಅನೇಕ ಯುದ್ಧ ವಿಮಾನಗಳು ಭಾರತದ ಯುದ್ಧ ಸಾಮಥ್ರ್ಯ ಪ್ರತಿಬಿಂಬಿತವಾಯಿತು.

ಕರ್ನಾಟಕ ಸರ್ಕಾರ ವಿಜಯನಗರ ಸಾಮ್ರಾಜ್ಯದ ವೈಭವವನ್ನು ಸಾರುವ ಕಲಾಕೃತಿಗಳನ್ನು ಪ್ರದರ್ಶನ ಮಾಡಿತು. ಉತ್ತರ ಪ್ರದೇಶ ಸರ್ಕಾರ ಅಯೋಧ್ಯೆಯಲ್ಲಿ ನಿರ್ಮಿಸಲಾಗುವ ರಾಮಮಂದಿರ ಪ್ರತಿಕೃತಿಯನ್ನು ಪ್ರದರ್ಶನ ಮಾಡಿತು. ಗುಜರಾತ್ ಸರ್ಕಾರ 52 ಸ್ತಂಬಗಳ ಸೂರ್ಯಮಂದಿರ ಸಭಾಮಂಟಪದ ಪ್ರತಿಕೃತಿಯನ್ನು ಪ್ರದರ್ಶನ ಮಾಡಿತು.

Facebook Comments