75 ಲಕ್ಷ ರೂ. ಗ್ರಾಮ ವಿಕಾಸ ಯೋಜನೆಗೆ ಸಿ.ಟಿ.ರವಿ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

ct-ravi
ಚಿಕ್ಕಮಗಳೂರು,ಫೆ.3- ಸಮಗ್ರ ಗ್ರಾಮ ವಿಕಾಸವಾಗಿ ಕುರುವಂಗಿ ಮಾದರಿ ಗ್ರಾಮವಾಗಲು ಗ್ರಾಮಸ್ಥರ ಸಹಕಾರ ಅಗತ್ಯ ಎಂದು ಶಾಸಕ ಸಿ.ಟಿ.ರವಿ ಹೇಳಿದರು.
ತಾಲೂಕಿನ ಕುರುವಂಗಿಯಲ್ಲಿ 75ಲಕ್ಷ ರೂ ವೆಚ್ಚದ ಗ್ರಾಮ ವಿಕಾಸ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಮೊದಲ ಸುವರ್ಣ ಗ್ರಾಮವನ್ನು ಕುರುವಂಗಿಗೆ ನೀಡಿದ್ದೆ, ತಾಲೂಕಿಗೆ 2 ಬಂದಂತ ಗ್ರಾಮ ವಿಕಾಸ ಯೋಜನೆಯಲ್ಲಿ ಒಂದನ್ನು ದೇವಗೊಂಡನಹಳ್ಳಿಗೆ ನೀಡಿ ಮತ್ತೊಂದನ್ನು ಇದೇ ಗ್ರಾಮಕ್ಕೆ ಮೊದಲನೆ ಪಾಲುಸಿಗಬೇಕೆಂಬ ದೃಷ್ಟಿಯಿಂದ ಆದ್ಯತೆ ಕೊಟ್ಟು ಅಭಿವೃದ್ದಿಗೆ ಸಹಕರಿಸಲಾಗುತ್ತಿದೆ. ಗ್ರಾಮ ವಿಕಾಸ ಎಂದರೆ ಸಂಪೂರ್ಣ ಶೌಚಾಲಯಯುಕ್ತ, ಶುದ್ದಗಂಗಾ ಘಟಕ ನಿರ್ಮಾಣವಾಗಿರಬೇಕು, ಕೌಶಲ್ಯಾಭಿವೃದ್ದಿ ಹೊಂದಿರಬೇಕು ಮತ್ತು ಯಾವುದೆ ಮಕ್ಕಳು ಶಿಕ್ಷಣ ವಂಚಿತರಾಗಿರಬಾರದು ಎಂಬ ನಿಯಮಗಳಿವೆ ಎಂದು ವಿವರಿಸಿದರು.

ದುಶ್ಚಟದಿಂದ ದೂರಾಗಬೇಕು,ಉದ್ಯೋಗಕ್ಕೆ ಬೇಕಾದ ಯೋಜನೆಗಳನ್ನು ರೂಪಿಸಬೇಕು,ಮಾದರಿ ಕೃಷಿಕರಾಗಿರಬೇಕು ,ಹೈನುಗಾರಿಕೆಯಲ್ಲಿ ಬೆಳವಣಿಗೆಯಾಗಿರಬೇಕು ಎಂಬ ಹಲವು ನಿಯಮಗಳಿವೆ ಇವುಗಳನ್ನು ಪರಿಪೂರ್ಣಗೊಳಿಸಬೇಕು ಎಂದರು.ಬರಿ ರಸ್ತೆ ಚರಂಡಿ ಮಾಡಿದರೆ ಸಾಲದು ಮನುಷ್ಯ ಮತ್ತು ಕುಟುಂಬಗಳು ಅಭಿವೃದ್ದಿ ಹೊಂದಿದಾಗ ಗ್ರಾಮ ವಿಕಾಸವಾಗಲು ಸಾಧ್ಯ ಎಂದ ಅವರು, ಅಭಿವೃದ್ದಿ ಕೆಲಸದಲ್ಲಿ ಕಳಪೆ ಗುಣಮಟ್ಟ ಕಂಡುಬಂದರೆ ಯಾವುದೇ ಮುಲಾಜು ನೋಡದೆ ಜನಪ್ರತಿನಿಧಿಗಳಿಗೆ ದೂರು ನೀಡಿ ಎಂದು ಸಲಹೆ ನೀಡಿದರು. ಊರಿನ ಮುಖಂಡ ಗಿರಿಜೇಗೌಡ ಮಾತನಾಡಿ,ಶಾಸಕರು ಆಯ್ಕೆಯಾದಾಗಿನಿಂದ ಕುರುವಂಗಿ ಅಭಿವೃದ್ದಿಯಲ್ಲಿ ಬಹಳ ಸಹಕರಿಸಿದ್ದೀರಿ. 6.75 ಲಕ್ಷರೂ ವೆಚ್ಚದಲ್ಲಿ ಶುದ್ದ ಗಂಗಾ ಘಟಕ ಸಾಪನೆ,1ಕೋಟಿ ವೆಚ್ಚದಲ್ಲಿ ಸುವರ್ಣಗ್ರಾಮ ಯೋಜನೆ,50 ಲಕ್ಷದ ಸಮುದಾಯ ಭವನಗಳು ಸೇರಿದಂತೆ ,ನರಿಗುಡ್ಡೇನಹಳ್ಳಿ ಯಿಂದ ನೆಟ್ಟೇಕೆರೆಹಳ್ಳಿ ವರೆಗೂ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದ್ದೀರಿ, ಅದಲ್ಲದೆ ಗ್ರಾಮ ವಿಕಾಸ ಯೋಜನೆ ಮೂಲಕ ಸಂಪೂರ್ಣ ರಸ್ತೆ ಅಭಿವೃದ್ದಿಗೆ ಸಹಕರಿಸಿದ್ದೀರಿ ಎಂದು ಸ್ಮರಿಸಿದರು.

ವಿವಿಧ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಾಂಡುರಂಗಶೆಟ್ಟಿ ಮತ್ತು ಮಾಜಿ ಸದಸ್ಯ ಕೆ.ಟಿ.ಮರಿಶೆಟ್ಟಿಯವನ್ನು ಸ್ವಾಗತಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್,ತಾಲೂಕು ಪಂಚಾಯಿತ ಸದಸ್ಯ ಜಯಣ್ಣ ,ಎಪಿಎಂಸಿ ಸದಸ್ಯ ವಿಕ್ರಾಂತ್,ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಮ್ಯ ಎಸ್‍ಡಿಎಂಸಿ ಅಧ್ಯಕ್ಷರಾದ ಚೆನ್ನಶೆಟ್ಟಿ, ಗಂಗಪ್ಪ ಮುಖಂಡರಾದ ಕೋಟೆ ರಂಗನಾಥ್ ,ಕನಕರಾಜ್ ,ಕೆ.ಪಿ.ವೆಂಕಟೇಶ್,ಪುಟ್ಟಸ್ವಾಮಿಶೆಟ್ಟಿ ,ಗಂಗಾದರಶೆಟ್ಟಿ ,ಯೋಗೀಶ್,ಚೇತನ್,ಮೋಹನ್,ಗುರುಸ್ವಾಮಿ,ಚಂದ್ರು, ಶೇಖರ್,ಶಿವಣ್ಣ ಇತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin