ವುಹಾನ್‍ನಿಂದ 76 ಭಾರತೀಯರ ಸ್ಥಳಾಂತರ

ಈ ಸುದ್ದಿಯನ್ನು ಶೇರ್ ಮಾಡಿ

ವುಹಾನ್/ನವದೆಹಲಿ, ಫೆ.27- ವಿಶ್ವಾದ್ಯಂತ ಭಾರೀ ಆತಂಕ ಸೃಷ್ಟಿಸಿ ಸಾವು-ನೋವು ಸಹಸ್ರಾರು ಜನರ ಸೋಂಕಿಗೆ ಕಾರಣವಾದ ಕೋವಿಡ್-19 ಸಾಂಕ್ರಾಮಿಕ ರೋಗದ ಕೇಂದ್ರ ಬಿಂದು ಚೀನಾದ ವುಹಾನ್‍ನಿಂದ ಮತ್ತಷ್ಟು ಭಾರತೀಯರನ್ನು ಸ್ಥಳಾಂತರಿಸಲಾಗಿದೆ.

ಭಾರತೀಯ ವಾಯುಪಡೆಯ ವಿಶೇಷ ವಿಮಾನ ಹೆಬಿ ಪ್ರಾಂತ್ಯದ ವುಹಾನ್‍ಗೆ ತೆರಳಿ 76 ಭಾರತೀಯರು ಮತ್ತು 36 ವಿದೇಶಿಯರನ್ನು ಹೊತ್ತು ನವದೆಹಲಿಗೆ ಹಿಂತಿರುಗಿದೆ.

ಇವರೆಲ್ಲರನ್ನು ನವದೆಹಲಿಯ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಕೇಂದ್ರ ಕಚೇರಿಯ ವಿಶೇಷ ವೈದ್ಯಕೀಯ ಘಟಕದಲ್ಲಿ ಇರಿಸಲಾಗಿದ್ದು , ಸೂಕ್ತ ತಪಾಸಣೆ ನಡೆಸಲಾಗುತ್ತಿದೆ. ಈಗಾಗಲೇ ಎರಡು ತಂಡಗಳಲ್ಲಿ ವುಹಾನ್‍ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲಾಗಿದೆ.
ವಿವಿಧ ಪ್ರಾಂತ್ಯಗಳಲ್ಲಿ ಇರುವ ಮತ್ತಷ್ಟು ಭಾರತೀಯರನ್ನು ಕರೆ ತರುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

Facebook Comments