ಲಡಾಖ್‍ ಸಂಘರ್ಷದಲ್ಲಿ ಗಾಯಗೊಂಡಿದ್ದ 76 ಯೋಧರು ಚೇತರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ/ಗಾಲ್ವಾನ್ ಕಣಿವೆ (ಲಡಾಖ್) ಜೂ.19- ಪೂರ್ವ ಲಡಾಖ್‍ನ ಗಾಲ್ವಾನ್‍ಕಣಿವೆಯ ಗಡಿ ಭಾಗದಲ್ಲಿ ಭಾರತ ಮತ್ತುಚೀನಾ ಸೈನಿಕರ ಸಂಘರ್ಷದಲ್ಲಿ ಗಾಯಗೊಂಡಿದ್ದ 76 ಭಾರತೀಯ ಯೋಧರು ಚೇತರಿಸಿ ಕೊಂಡಿದ್ದಾರೆ ಎಂದು ಸೇನಾ ಪಡೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತ ಮತ್ತುಚೀನಾ ಯೋಧರ ಸಂಘರ್ಷದಲ್ಲಿ 20 ಯೋದರು ಹುತಾತ್ಮರಾಗಿ, 75ಕ್ಕೂ ಹೆಚ್ಚು ಸೈನಿಕರಿಗೆ ಗಾಯಗಳಾಗಿದ್ದವು. ಇವರಲ್ಲಿ 18 ಜನರ ಸ್ಥಿತಿ ಶೋಚನೀಯವಾಗಿದ್ದು, ಈಗ ಎಲ್ಲರೂ ಚೇತರಿಸಿಕೊಂಡು ಗುಣಮುಖರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ವೇಳೆ ಚೀನಾ ಸೇನಾಪಡೆ ಸೆರೆ ಹಿಡಿದಿದ್ದ 10 ಭಾರತೀಯ ಯೋಧರನ್ನುಎರಡೂ ದೇಶಗಳ ಮಾತುಕತೆ ನಂತರ ಬಿಡುಗಡೆ ಮಾಡಲಾಗಿದೆ.

ಇಂಡೋ-ಚೀನಾಗಡಿ ಭಾಗದಲ್ಲಿ ಈಗ ಬೂದಿ ಮುಚ್ಚಿದ ಕೆಂಡಂಥ ವಾತಾವರಣ ವಿದ್ದು, ಎರಡು ಕಡೆ ಭಾರೀ ಪ್ರಮಾಣದ ಯೋಧÀರು ಮತ್ತು ದೈತ್ಯಯುದ್ದೋಪಕರಣಗಳು ಜಮಾವಣೆಗೊಂಡಿದ್ದು, ಯುದ್ದದ ಬೀತಿಯ ಕಾರ್ಮೋಡಗಳು zಟ್ಟವಾಗುತ್ತಿವೆ. ಯಾವುದೇ ಪರಿಸ್ಥಿತಿ ಎದುರಿಸಲು ಭಾರತದ ಮೂರು ಸಶಸ್ತ್ರ ಪಡೆಗಳು ಸರ್ವ ಸನ್ನದ್ಧವಾಗಿವೆ.

Facebook Comments