8 ತಿಂಗಳಲ್ಲಿ ಎಲ್‍ಇಡಿ ಬಲ್ಬ್ ಗಳಿಂದ ಝಗಮಗಿಸಲಿವೆ ಬೆಂಗಳೂರು ಬೀದಿಗಳು

ಈ ಸುದ್ದಿಯನ್ನು ಶೇರ್ ಮಾಡಿ

LED-Light--02

ಬೆಂಗಳೂರು, ಡಿ.11-ಬೆಂಗಳೂರು ಮಹಾನಗರದಲ್ಲಿ ಇನ್ನು ಮುಂದೆ ನಳನಳಿಸಲಿವೆ ಎಲ್‍ಇಡಿ ಬಲ್ಬ್ ಗಳು. ಮುಂದಿನ 8 ತಿಂಗಳೊಳಗಾಗಿ ನಗರದ ಎಲ್ಲಾ ಕಡೆ ಬೀದಿ ದೀಪಗಳನ್ನು ತೆಗೆದು ಎಲ್‍ಇಡಿ ದೀಪಗಳನ್ನು ಅಳವಡಿಸಲಾಗುವುದು ಎಂದು ಆಯುಕ್ತ ಮಂಜುನಾಥ್‍ಪ್ರಸಾದ್ ತಿಳಿಸಿದರು. ಬಿಬಿಎಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಟರ್‍ನ್ಯಾಷನಲ್ ಫೈನಾನ್ಸ್ ಕಾರ್ಪೊರೇಷನ್ ಸಂಸ್ಥೆ ಎಲ್‍ಇಡಿ ಬಲ್ಬ್ ಅಳವಡಿಕೆ ಹಾಗೂ ವಿದ್ಯುತ್ ಉಳಿತಾಯದ ಬಗ್ಗೆ ಸರ್ವೆ ರಿಪೋರ್ಟ್ ನೀಡಿದ್ದು, 5 ಲಕ್ಷ ಎಲ್‍ಇಡಿ ಬಲ್ಬ್ ಅಳವಡಿಸುವ ಸಂಬಂಧ ಈ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.

ಎಲ್‍ಇಡಿ ಬಲ್ಬ್ ಅಳವಡಿಕೆಗೆ ಜಾಗತಿಕ ಟೆಂಡರ್ ಕರೆಯಲಾಗುವುದು. ಎಂಟು ತಿಂಗಳೊಳಗೆ ನಗರದ ಎಲ್ಲೆಡೆ ಎಲ್‍ಇಡಿ ಬಲ್ಬ್ ಅಳವಡಿಸಲಾಗುವುದು ಎಂದು ಆಯುಕ್ತರು ತಿಳಿಸಿದರು. ಪ್ರತಿ ತಿಂಗಳು ಬೀದಿ ದೀಪಗಳಿಂದ ಬರುವ 12 ಕೋಟಿ ರೂ. ವಿದ್ಯುತ್ ಬಿಲ್ ಪಾಲಿಕೆಗೆ ಹೊರೆಯಾಗುತ್ತಿದ್ದು, ಎಲ್‍ಇಡಿ ಬಲ್ಬ್ ಅಳವಡಿಕೆಯಿಂದ 9 ಕೋಟಿ ರೂ. ಉಳಿತಾಯವಾಗುತ್ತದೆ. ಇದನ್ನು ಬಿಬಿಎಂಪಿ ಹಾಗೂ ಐಎಫ್‍ಡಿ ಸಂಸ್ಥೆ ನಡುವೆ ಒಪ್ಪಂದ ಮಾಡಿಕೊಂಡಂತೆ ಬಳಸಿಕೊಳ್ಳಲಾಗುವುದು. ಇನ್ನು ಮುಂದೆ ಎಲ್‍ಇಡಿ ಬಲ್ಬ್ ಅಳವಡಿಕೆಯಿಂದ ಪ್ರತಿ ತಿಂಗಳ ಬೀದಿ ದೀಪಗಳ ಕರೆಂಟ್ ಬಿಲ್ ಕೇವಲ 3 ಕೋಟಿ ರೂ. ಪಾವತಿಸಬೇಕಾಗುತ್ತದೆ ಎಂದು ಅವರು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin