8 ಮಂದಿ ಜೆಡಿಎಸ್‍ ಶಾಸಕರ ಅನರ್ಹತೆ ಪ್ರಕರಣ 18ಕ್ಕೆ ಮುಂದೂಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

JDS-ML

ಬೆಂಗಳೂರು, ಸೆ.22- ರಾಜ್ಯಸಭೆ ಚುನಾವಣೆಯಲ್ಲಿ ವ್ಹಿಪ್ ಉಲ್ಲಂಘನೆ ಮಾಡಿ ಜೆಡಿಎಸ್‍ನಿಂದ ಅಮಾನತು ಗೊಂಡಿರುವ 8 ಮಂದಿ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆಯನ್ನು ವಿಧಾನಸಭಾಧ್ಯಕ್ಷ ಕೋಳಿವಾಡ ಅವರು ಅ.18ಕ್ಕೆ ಮುಂದೂಡಿದ್ದಾರೆ. ಅಮಾನತುಗೊಂಡಿರುವ 8 ಮಂದಿ ಶಾಸಕರ ಪೈಕಿ ಆರು ಮಂದಿ ಶಾಸಕರು ಇಂದಿನ ವಿಚಾರಣೆಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ವಿಧಾನಸಭಾಧ್ಯಕ್ಷ ಕೋಳಿವಾಡ ಅವರು ಎಲ್ಲ 8 ಮಂದಿ ಶಾಸಕರು ಒಟ್ಟಾಗಿ ಬನ್ನಿ ಎಂಬ ಸೂಚನೆ ನೀಡಿದರು.  ಶಾಸಕ ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಅನ್ಸಾರಿ ಅವರು ಇಂದಿನ ವಿಚಾರಣೆಗೆ ಗೈರು ಹಾಜರಾಗಿದ್ದರು.

ಶಾಸಕರಾದ ಜಮೀರ್ ಅಹ್ಮದ್ ಖಾನ್, ಚಲುವರಾಯಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯ್ಕ ಮತ್ತು ಗೋಪಾಲಯ್ಯ ಅವರು ವಿಚಾರಣೆಗೆ ಹಾಜರಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ ವ್ಹಿಪ್ ಉಲ್ಲಂಘಿಸಿದ 8 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕೆಂದು ಜೆಡಿಎಸ್ ಶಾಸಕರಾದ ಸಿ.ಎನ್. ಬಾಲಕೃಷ್ಣ, ಬಿ.ಬಿ.ಲಿಂಗಯ್ಯ ಸಭಾಧ್ಯಕ್ಷರಿಗೆ ದೂರು ನೀಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin