8 ಮಕ್ಕಳನ್ನು ಇರಿದು ಕೊಂದ ಮಹಿಳೆಯನ್ನು ವಿಚಾರಣೆಯಿಂದ ಮುಕ್ತಗೊಳಿಸಿದ ಕೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Women-Aus

ಬ್ರಿಸ್ಬೇನ್, ಮೇ 5-ತನ್ನ ಏಳು ಮಕ್ಕಳು ಹಾಗೂ ಸಂಬಂಧಿಕರ ಶಿಶುವೊಂದನ್ನು ಇರಿದು ಕೊಂದ ಆಸ್ಟ್ರೇಲಿಯಾದ ಮಹಿಳೆಯ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸುವುದಿಲ್ಲ ಎಂದು ನ್ಯಾಯಾಲಯವೊಂದು ತೀರ್ಪು ನೀಡಿದೆ. 2014ರಲ್ಲಿ ಈ ಭೀಕರ ಘಟನೆ ಉತ್ತರ ಆಸ್ಟ್ರೇಲಿಯಾದಲ್ಲಿ ನಡೆದಿತ್ತು. ಆರೋಪಿ ಮಹಿಳೆ ಮಾದಕದ್ರವ್ಯ ವ್ಯಸನಿಯಾಗಿದ್ದು, ಅದರ ಮತ್ತಿನಲ್ಲಿ ನಿಯಂತ್ರಣ ಕಳೆದುಕೊಂಡು ಈ ಕೃತ್ಯ ಎಸಗಿದ್ದಾಳೆ, ಅಲ್ಲದೆ, ತನ್ನನ್ನು ತಾನು ಇರಿದುಕೊಂಡಿದ್ದಾಳೆ ಎಂದು ಕೋರ್ಟ್ ಹೇಳಿದೆ. ಮಾನಸಿಕ ಅಸ್ವಸ್ಥತೆಗೆ ಒಳಗಾಗಿರುವ ಈಕೆಯನ್ನು ಅನಿರ್ದಿಷ್ಟಾವಧಿವರೆಗೆ ಆಸ್ಪತ್ರೆಯಲ್ಲಿ ಮೇಲುಸ್ತುವಾರಿಯಲ್ಲಿ ಇರಿಸಲಾಗುವುದು ಎಂದು ತಿಳಿಸಲಾಗಿದೆ.



ರೈನಾ ಟಾಯ್ಡೆ (37) ಎರಡು ವರ್ಷದಿಂದ 14 ವರ್ಷದೊಳಗಿನ ತನ್ನ ಮಕ್ಕಳನ್ನು 19ನೇ ಡಿಸೆಂಬರ್, 2014ರಂದು ಕೇನ್ರ್ಸ್‍ನಲ್ಲಿನ ತನ್ನ ಮನೆಯಲ್ಲಿ ಇರಿದು ಕೊಂದಿದ್ದಳು. ಬಳಿಕ ತನ್ನನ್ನು 35 ಬಾರಿ ತಿವಿದುಕೊಂಡು ತೀವ್ರ ಗಾಯಗೊಂಡಿದ್ದಳು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin