8 ವಿಧಾನ ಪರಿಷತ್ ಸದಸ್ಯರ ವಿರುದ್ಧ ಕ್ರಮಕ್ಕೆ ಅನಿಲ್ ಕುಮಾರ್ ಝಾಗೆ ದೂರು

ಈ ಸುದ್ದಿಯನ್ನು ಶೇರ್ ಮಾಡಿ

Padmanabhareddy--01

ಬೆಂಗಳೂರು, ಜೂ.9-ಪ್ರಯಾಣಭತ್ಯೆ ದುರ್ಬಳಕೆ ಮಾಡಿಕೊಂಡು ಆರೋಪಕ್ಕೆ ಗುರಿಯಾಗಿರುವ ಎಂಟು ಮೇಲ್ಮನೆ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿರುವ ಬಿಬಿಎಂಪಿ ವಿರೋಧಪಕ್ಷದ ನಾಯಕ ಪದ್ಮನಾಭರೆಡ್ಡಿ, ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ಕುಮಾರ್ ಝಾ ಅವರಿಗೆ ಇಂದು ದೂರು ಸಲ್ಲಿಸಿದರು.  ಅನಿಲ್ಕುಮಾರ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಪಿಐ ಸೆಕ್ಷನ್ 31ರ ಪ್ರಕಾರ ಈ ಎಂಟು ಮಂದಿ ಎಂಎಲ್ಸಿಗಳು ನಿಯಮ ಉಲ್ಲಂಘಿಸಿದ್ದಾರೆ. ಹಾಗಾಗಿ ಅಲ್ಲಂವೀರಭದ್ರಪ್ಪ, ಆರ್.ಬಿ.ತಿಮ್ಮಾಪುರ, ರಘುಆಚಾರ್, ಎಂ.ಡಿ.ಲಕ್ಷ್ಮೀನಾರಾಯಣ, ಬೋಸರಾಜು, ಎಸ್.ರವಿ, ಸಿ.ಆರ್.ಮನೋಹರ್ ಹಾಗೂ ಅಪ್ಪಾಜಿಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.ಬಿಬಿಎಂಪಿಯಲ್ಲಿ ಕೇವಲ 76 ಸ್ಥಾನ ಹೊಂದಿರುವ ಕಾಂಗ್ರೆಸ್ನವರು 101 ಸದಸ್ಯಬಲ ಹಂದಿರುವ ಬಿಜೆಪಿಗೆ ಅಧಿಕಾರ ತಪ್ಪಿಸಲು ವಾಮಮಾರ್ಗದ ಮೂಲಕ ದೂರದ ಊರಲ್ಲಿ ವಾಸಿಸುವ ಮೇಲ್ಮನೆ ಸದಸ್ಯರನ್ನು ಬೆಂಗಳೂರು ನಿವಾಸಿಗಳೆಂದು ಹೇಳಿ ಚುನಾವಣೆಯಲ್ಲಿ ಮತ ಹಾಕುವಂತೆ ಮಾಡಿದ್ದಾರೆ. ಹುಟ್ಟೂರಿನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದು ಹಾಕಿಸಿ ಅದೇ ದಿನ ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸಲಾಗಿದೆ. ಒಮ್ಮೆ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಮತ್ತೆ ಸೇರ್ಪಡೆಯಾಗಬೇಕಾದರೆ ಏಳು ದಿನಗಳ ಕಾಲ ಕಾಯಬೇಕು. ಆದರೆ, ಈ ಶಾಸಕರ ಹೆಸರು ಅಂದೇ ಸೇರ್ಪಡೆಯಾಗಿರುವುದು ಆರ್ಪಿಐ ಪ್ರಕಾರ ತಪ್ಪು.

ಬೆಂಗಳೂರು ನಿವಾಸಿಗಳು ಎಂದು ನಮೂದಿಸಿ ಕೇವಲ ಪ್ರಯಾಣ ಭತ್ಯೆಗಾಗಿ ಸ್ವಂತ ಊರಿನಿಂದ ಪ್ರಯಾಣ ಮಾಡುತ್ತಿದ್ದೇವೆ ಎಂದು ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಲಕ್ಷಾಂತರ ರೂ. ವಂಚಿಸಿದ್ದಾರೆ. ಈ ಬಗ್ಗೆ ಸಭಾಪತಿಗಳಿಗೂ ನಾನು ದೂರು ಕೊಟ್ಟಿದ್ದೇನೆ. ಆರ್ಪಿಐ ಸೆಕ್ಷನ್ 31 ಉಲ್ಲಂಘನೆ ಮಾಡಿದ್ದಾರೆ ಎಂದು ಚುನಾವಣಾ ಅಧಿಕಾರಿಗಳಿಗೂ ದೂರು ನೀಡಿದ್ದೇನೆ ಎಂದು ಹೇಳಿದರು. ನನ್ನ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಈ ಎಂಟು ಮಂದಿ ಶಾಸಕರ ವಿರುದ್ಧ ರಾಜ್ಯಪಾಲರಿಗೂ ದೂರು ನೀಡುತ್ತೇನೆ ಎಂದರು.

ಉಗ್ರಪ್ಪ ಮಹಾನ್ಮೇಧಾವಿ ಅಲ್ಲ:

ವಿಧಾನಪರಿಷತ್ನ ಈ ಎಂಟು ಸದಸ್ಯರ ವಿರುದ್ಧ ಸಭಾಪತಿಗಳಿಗೆ ನಾನು ದೂರು ನೀಡಿರುವುದು ಕಾನೂನು ಬದ್ಧವಾಗಿಲ್ಲ ಎಂಬ ಹೇಳಿಕೆನೀಡಿರುವ ವಿ.ಎಸ್.ಉಗ್ರಪ್ಪ ಅವರ ವಿರುದ್ಧ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಪದ್ಮನಾಭರೆಡ್ಡಿ, ಅವರೇನು ಮಹಾನ್ ಮೇಧಾವಿ ಅಲ್ಲ. ನಗರದಲ್ಲಿ ಹಲವಾರು ಕಾನೂನು ಪಂಡಿತರಿದ್ದಾರೆ. ಅವರು ನಿರ್ಧರಿಸುತ್ತಾರೆ. ತಮ್ಮ ಪಕ್ಷದ ಶಾಸಕರನ್ನು ಸಮರ್ಥಿಸಿಕೊಳ್ಳಲು ಉಗ್ರಪ್ಪ ಕಾನೂನು ಮೀರಿ ಮಾತನಾಡಿದ್ದಾರೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin