ಕಫ್ರ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ 8 ಮಂದಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಏ.11- ಕೊರೋನಾ ಕಫ್ರ್ಯೂ ಉಲ್ಲಂಘಿಸಿ ಶನಿವಾರ(ಏ.10) ರಾತ್ರಿ ಪಾರ್ಟಿ ಮಾಡುತ್ತಿದ್ದ 8 ಮಂದಿಯನ್ನು ವಿಜಯನಗರ ಪೊಲೀಸರು ಬಂಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಅಬ್ಬರ ತಡೆಯುವ ನಿಟ್ಟಿನಲ್ಲಿ ರಾಜ್ಯದ ಎಂಟು ನಗರಗಳಲ್ಲಿ ಸರ್ಕಾರ ಶನಿವಾರದಿಂದ ಏ.20ರವರೆಗೆ ಕೊರೋನಾ ಕಫ್ರ್ಯೂ ಜಾರಿಗೊಳಿಸಿದ್ದರೂ ಮೈಸೂರಿನಲ್ಲಿ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದರು. ವಿಜಯನಗರದಲ್ಲಿರುವ ಕರಣ್ ರೆಸಿಡೆನ್ಸಿಯಲ್ಲಿ ಯುವಕರು ರಾತ್ರಿ 12 ಗಂಟೆಯಾದರೂ ಪಾರ್ಟಿ ಮಾಡುತ್ತಿದ್ದರು. ಪೊಲೀಸರು ದಾಳಿ ಮಾಡಿ 8 ಜನರನ್ನು ಬಂಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

# 61 ವಾಹನಗಳ ಜಪ್ತಿ :
ಬೆಂಗಳೂರು, ಏ.11- ಕೊರೊನಾ ನಿಯಂತ್ರಣಕ್ಕೆ ನಿನ್ನೆ ರಾತ್ರಿಯಿಂದ ಆರಂಭಿಸಲಾಗಿರುವ ಕೊರೊನಾ ಕಫ್ರ್ಯೂವನ್ನು ಆಗ್ನೇಯ ವಿಭಾಗದ ಪೊಲೀಸರು ಕಟ್ಟುನಿಟ್ಟಾಗಿ ಜಾರಿ ಗೊಳಿಸಿದ್ದು, 61 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೂ ಕಫ್ರ್ಯೂವನ್ನು ಜಾರಿಗೊಳಿಸಲಾಗಿದೆ. ಈ ಅವಯಲ್ಲಿ ಅನಗತ್ಯವಾಗಿ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ರಾತ್ರಿ ಗಸ್ತನ್ನು ಹೆಚ್ಚಿಸಿದ್ದು , ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಕಾವಲಿಗೆ ನಿಂತಿದ್ದರು. ನಿನ್ನೆ ರಾತ್ರಿ ಅನಗತ್ಯವಾಗಿ ಸುತ್ತಾಡುತ್ತಿದ್ದ 55 ದ್ವಿಚಕ್ರ ವಾಹನಗಳು , 5 ನಾಲ್ಕು ಚಕ್ರ ವಾಹನಗಳು, 1 ಆಟೋ ರಿಕ್ಷಾ ಸೇರಿ 61 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನಾದ್ಯಂತ ಇದೇ ರೀತಿ ಕಫ್ರ್ಯೂ ಜಾರಿಯಲ್ಲಿದ್ದು, ಅನಗತ್ಯವಾಗಿ ಓಡಾಟ ಮಾಡಿದರೆ ಪ್ರಕೃತಿ ವಿಕೋಪ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ. ಒಮ್ಮೆ ವಾಹನವೊಂದನ್ನು ಜಪ್ತಿ ಮಾಡಿದರೆ ಅದನ್ನು ಬಿಡಿಸಿಕೊಳ್ಳಲು ಸಾಕಷ್ಟು ನಿಯಮಾವಳಿಗಳನ್ನು ಪಾಲನೆ ಮಾಡಬೇಕಿದೆ. ಹೀಗಾಗಿ ಸಾರ್ವಜನಿಕರು ಅನಗತ್ಯವಾಗಿ ಕಾನೂನಿನ ತೊಡಕಿಗೆ ಸಿಲುಕದಿರಲು ಕಫ್ರ್ಯೂ ನಿಯಮಾವಳಿಗಳನ್ನು ಪಾಲನೆ ಮಾಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

ಅಗತ್ಯ ಸಂದರ್ಭಗಳಲ್ಲಿ ಮತ್ತು ಕೆಲವು ಸೇವೆಗಳ ವಾಹನಗಳು ಸಂಚಾರಕ್ಕೆ ಅವಕಾಶವಿದೆಯಾದರೂ ಮೋಜು, ಮಸ್ತಿಗಾಗಿ ತಿರುಗಾಡುವವರಿಗೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಸರ್ಕಾರ 8 ಜಿಲ್ಲಾ ಕೇಂದ್ರಗಳ ನಗರಗಳಲ್ಲಿ 10 ದಿನಗಳ ಕಾಲ ಬಿಗಿಯಾದ ಕೊರೊನಾ ಕಫ್ರ್ಯೂವನ್ನು ಜಾರಿಗೊಳಿಸಿದೆ.

Facebook Comments

Sri Raghav

Admin