ಸಂಸತ್, ಮಸೀದಿ ಮೇಲೆ ದಾಳಿ ಪ್ರಕರಣದಲ್ಲಿ 8 ಐಎಸ್ ಉಗ್ರರಿಗೆ ಗಲ್ಲು

ಈ ಸುದ್ದಿಯನ್ನು ಶೇರ್ ಮಾಡಿ

Iran--01

ಟೆಹರಾನ್, ಜು.7-ಇರಾನ್ ರಾಜಧಾನಿ ಟೆಹರಾನ್‍ನಲ್ಲಿ ಸಂಸತ್ ಮತ್ತು ಆಯತೊಲ್ಲಾ ರುಹೊಲ್ಲಾ ಖೊಮೀನಿ ಮಸೀದಿ ಮೇಲೆ ನಡೆದ ದಾಳಿ ಪ್ರಕರಣಗಳ ಸಂಬಂಧ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ಎಂಟು ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಜೂನ್ 7, 2017ರಲ್ಲಿ ಸಂಸತ್ ಮತ್ತು ಮಸೀದಿ ಮೇಲೆ ನಡೆದ ದಾಳಿಯಲ್ಲಿ ಐಎಸ್ ಉಗ್ರರು 18 ಮಂದಿಯನ್ನು ಕೊಂದು ಕನಿಷ್ಠ 30 ಜನರನ್ನು ಗಾಯಗೊಳಿಸಿದ್ದರು. ಈ ಸಂಬಂಧ ದೋಷಿಗಳು ಎಂದು ಪರಿಗಣಿಸಲ್ಪಟ್ಟಿದ್ದ ಎಂಟು ಉಗ್ರರನ್ನು ನೇಣುಗಂಬಕ್ಕೇರಿಸಲಾಗಿದೆ ಎಂದು ಇರಾನ್ ಸರ್ಕಾರ ಇಂದು ತಿಳಿಸಿದೆ.

Facebook Comments

Sri Raghav

Admin