8 ಮಂದಿ ದರೋಡೆಕೋರರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಸೆ.16- ದರೋಡೆಗೆ ಹೊಂಚು ಹೋಗುತ್ತಿದ್ದ 8 ಮಂದಿಯನ್ನು ನಗರದ ಸರಸ್ವತಿ ಪುರಂ ಠಾಣೆ ಪೊಲೀಸರು ಬಂಧಿಸಿದ್ದಾರೆ. ಶರತ್, ಸುಮಂತ್, ಧರ್ಮೇಶ್, ಕರಿಯ, ದಿನೇಶ್, ಸುನೀಲ್ ಕುಮಾರ್, ಶಶಾಂಕ್, ಕಾರ್ತಿಕ್ ಮತ್ತು ಮಹದೇವ ಬಂಧಿತ ದರೋಡೆಕೋರರು. ಆರೋಪಿಗಳಿಂದ 6 ಸಾವಿರ ಹಣ, 4 ಬೈಕ್, 11 ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು, ಹಾಕಿ ಸ್ಟಿಕ್, 2 ಡ್ರ್ಯಾಗನ್ ಐದು ಮಂಕಿ ರ್ಯಾಪ್‍ಗಳು, 5 ಖಾರಪುಡಿ ಪೊಟ್ಟಣ, ರಾಡು, 3 ವಿಕೇಟ್‍ಗಳು, ಒಂದು ಲಾಂಗನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇವರ ಬಂಧನದಿಂದ ನಗರದ ಸರಸ್ವತಿಪುರಂ ವಿದ್ಯಾರಣ್ಯಪುರಂ, ಲಕ್ಷ್ಮೀಪುರಂನ ದರೋಡೆ ಪ್ರಕರಣಗಳು, ವಿಜಯನಗರ ಮತ್ತು ಕೆಆರ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಕೊಲೆ ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಸರಸ್ವತಿ ಪುರಂ ಠಾಣೆ ಪಿಎಸ್‍ಐ ಭವ್ಯಾ ರಾತ್ರಿ ಗಸ್ತಿನಲ್ಲಿದ್ದಾಗ ನಗರದ ಬೋಗಾದಿ ರಿಂಗ್ ರಸ್ತೆಯಲ್ಲಿನ ಬೋಗಲಿಂಗೇಶ್ವರ ದೇವಸ್ಥಾನದ ಬಳಿ ಓಮ್ನಿ ಕಾರಿನ ಬಳಿ ಆನುಮಾನಸ್ಪದವಾಗಿ ಹಲವರು ನಿಂತಿರುವುದು ಕಂಡು ಬಂದಿದೆ.

ತಕ್ಷಣ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಸಾರ್ವಜನಿಕರ ವಾಹನ ತÀಡೆದು ಹಣ, ಆಭರಣ ದೋಚಲು ಹೊಂಚು ಹಾಕುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಡಿಸಿಪಿಗಳಾದ ಡಾ. ಪ್ರಕಾಶ್‍ಗೌಡ, ಗೀತಾ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಎಸಿಪಿ ಪೂರ್ಣಚಂದ್ರ ತೇಜಸ್ವಿ ಉಸ್ತುವಾರಿಯಲ್ಲಿ ಇನ್‍ಸ್ಪೆಕ್ಟರ್ ವಿಜಯಕುಮಾರ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments