ಈವರೆಗೆ ಶ್ರಮಿಕ್ ಎಕ್ಸ್ ಪ್ರೆಸ್ ರೈಲುಗಳಲ್ಲಿ 80 ಕಾರ್ಮಿಕರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 30-ಕೊರೊನಾ ವೈರಸ್ ಹಾವಳಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಲಕ್ಷಾಂತರ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲು ಭಾರತೀಯ ರೈಲ್ವೆಯ ಶ್ರಮಿಕ್ ಸ್ಪೆಷಲ್ ಎಕ್ಸ್‍ಪ್ರೆಸ್‍ಗಳಲ್ಲಿ ಈವರೆಗೆ 80 ಮಂದಿ ಮೃತಪಟ್ಟಿದ್ದಾರೆ.

ಮೇ 9 ರಿಂದ 27ರವರೆಗೆ ಶ್ರಮಿಕ್ ವಿಶೇಷ ರೈಲುಗಳಲ್ಲಿ ಒಟ್ಟು 80 ಮಂದಿ ಅಸುನೀಗಿದ್ದಾರೆ ಎಂದು ರೈಲ್ವೆ ಸುರಕ್ಷತಾ ದಳ (ಆರ್‍ಪಿಎಫ್) ನೀಡಿರುವ ಅಂಕಿ ಅಂಶ ತಿಳಿಸಿದೆ.

ಮೃತರಲ್ಲಿ ಬಹುತೇಕ ವಲಸೆ ಕಾರ್ಮಿಕರಾಗಿದ್ದು, ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು, ಶ್ರಮಿಕ್ ಸ್ಪೆಷಲ್ ರೈಲುಗಳಲ್ಲಿ ಸಂಚರಿಸುವುದಕ್ಕೂ ಮೊದಲೇ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತ್ತು ಎಂದು ಮಾಹಿತಿ ನೀಡಲಾಗಿದೆ. ಶ್ರಮಿಕ್ ಎಕ್ಸ್‍ಪ್ರೆಸ್ ರೈಲುಗಳಲ್ಲಿ ವಲಸೆ ಕಾರ್ಮಿಕರು, ಗರ್ಭಿಣಿಯರು, ಮತ್ತು ವೃದ್ದರ ಸಾವು ಪ್ರಕರಣಗಳು ವರದಿಯಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಪ್ರಯಾಣಿಕರಿಗೆ ಈ ಸಂಬಂಧ ಸಲಹೆ ನೀಡಿತ್ತು.

ಅನಾರೋಗ್ಯಪೀಡಿತರು, ರೋಗಿಗಳು, ಗರ್ಭಿಣಿಯರು, 65 ವರ್ಷಗಳ ಮೇಲ್ಪಟ್ಟ ವೃದ್ದರು ಮತ್ತು 10 ವರ್ಷ ಒಳಗಿನ ಮಕ್ಕಳು ಶ್ರಮಿಕ್ ಎಕ್ಸ್‍ಪ್ರೆಸ್ ರೈಲುಗಳಲ್ಲಿ ಪ್ರಯಾಣಿಸದಂತೆ ಭಾರತೀಯ ರೈಲ್ವೆ ಸಲಹೆ ಮಾಡಿತ್ತು.

Facebook Comments