9ನೆ ಅಕ್ಕ ಸಮ್ಮೇಳನದಲ್ಲಿ ನಡೆಯುವ ಕಾರ್ಯಕ್ರಮಗಳ ವಿವರ ಇಲ್ಲಿದೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Akka

ಬೆಂಗಳೂರು, ಆ.31- ಅಕ್ಕ ಸಮ್ಮೇಳನದಲ್ಲಿ ಈ ಬಾರಿ ಆಧ್ಯಾತ್ಮಿಕ ವಿಷಯ ಕುರಿತು ವಿಶೇಷ ಕಾರ್ಯಕ್ರಮ ನಡೆಯಲಿದೆ. ನ್ಯೂಜೆರ್ಸಿಯ ಅಟ್ಲಾಂಟಿಕ್ಗೆ ಈಗಾಗಲೇ ಕರ್ನಾಟಕದಿಂದ ಕಲಾವಿದರ ದಂಡು ಅಲ್ಲಿಗೆ ತೆರಳಿದೆ.  ಈ ಬಾರಿ ಹಲವು ವಿಶೇಷ ಕಾರ್ಯ ಕ್ರಮಗಳ ನಡುವೆ ಆಧ್ಯಾತ್ಮಿಕ ಅನ್ವೇಷಣೆ ಕುರಿತು ದಾಶರಥಿ ಘಟ್ಟು ಅವರು ಸ್ಪಿರಿಚುಯಾಲಿಟಿ ಸಮಿತಿ ಮುಖ್ಯಸ್ಥೆ ಜ್ಯೋತಿಶ್ರೀ ಹೊನ್ನವಳ್ಳಿ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಜೀವನಕ್ಕೆ ಅಗತ್ಯವಿರುವ ಚೈತನ್ಯವೇ ಸ್ಪಿರಿಚು ಯಾಲಿಟಿ. ಹಾಗಾಗಿ ಸ್ಪಿರಿಚುಯಾಲಿಟಿ ಸಮಿತಿಯಿಂದ ನ್ಯೂ ಜೆರ್ಸಿಯ ಅಟ್ಲಾಂಟಿಕ್ ನಗರದಲ್ಲಿ ನಡೆಯಲಿ ರುವ 9ನೆ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸ ಲಾ ಗುತ್ತಿದೆ ಎಂದು ಜ್ಯೋತಿಶ್ರೀ ಹೊನ್ನವಳ್ಳಿ ತಿಳಿಸಿದ್ದಾರೆ.

ಸ್ಪಿರಿಚುಯಾಲಿಟಿ ಎಂಬುದು ಯಾವುದೋ ಒಂದು ವಯಸ್ಸಿನವರಿಗೆ ಮಾತ್ರ ಸಂಬಂದಿಸಿದ್ದಲ್ಲ. ಬದುಕಿನಲ್ಲಿ ಚೈತನ್ಯ ಬೇಕಾದವರಿಗೆಲ್ಲ ಅತ್ಯಗತ್ಯವಾದುದಾಗಿದೆ. ಹಾಗಾಗಿ ನಮ್ಮ ಸಂಸ್ಕೃತಿಯಲ್ಲೇ ಅಡಕವಾಗಿರುವ ಹಬ್ಬ-ಹರಿದಿನಗಳು, ದಾಸರ ಪದಗಳು, ವಚನ ಸಾಹಿತ್ಯ ಇವೆಲ್ಲವೂ ಸ್ಪಿರಿಚುಯಾಲಿಟಿಯ ಅಂಶಗಳೇ ಆಗಿವೆ ಎಂದರು.  ನ್ಯೂ ಜೆರ್ಸಿಯಲ್ಲಿ ನಡೆಯುವ ಸಮ್ಮೇಳನದಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಸ್ಪಿರಿಚುಯಾಲಿಟಿ ಕಾರ್ಯಕ್ರಮ ನಡೆಸಲು ಉದ್ದೇಶಿಸಿದ್ದೇವೆ. ಅವುಗಳಲ್ಲಿ ಪ್ರಮುಖವಾಗಿ ಕೆನಡಾ ನಿವಾಸಿಗಳಿಗಾಗಿ ಶ್ಲೋಕ ಹೇಳುವ ಸ್ಪರ್ಧೆ, ತಮಸೋಮ ಜ್ಯೋತಿರ್ಗಮಯ ಎಂಬ ಕಾರ್ಯಕ್ರಮದಲ್ಲಿ ಶ್ರೀ ಜಯೇಂದ್ರಪುರಿ ಮಹಾಸ್ವಾಮಿಗಳು ಸಂತೃಪ್ತ ಜೀವನದ ಕುರಿತು ಮಾರ್ಗದರ್ಶನ ನೀಡಲಿದ್ದಾರೆ.
ಗೌರಿ-ಗಣೇಶ ಹಬ್ಬದ ಅಂಗವಾಗಿ ಆವೆ ಮಣ್ಣಿನಿಂದ ಗಣೇಶ ಮಾಡುವ ಕಾರ್ಯಾಗಾರ ಸಾಮೂಹಿಕ ಗೌರಿ-ಗಣೇಶ ಪೂಜೆಯನ್ನು ಅರ್ಚಕ ಯೋಗೀಂದ್ರಭಟ್ಟರ ನೇತೃತ್ವದಲ್ಲಿ ನಡೆಸಲಾಗುತ್ತದೆ. ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಬೋಧಿ ವೃಕ್ಷವೆಂಬ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಕ್ಷೇತ್ರದ ದಿಗ್ಗಜರೆನಿಸಿರುವ ಸುತ್ತೂರು ಜಗದ್ಗುರು ಶ್ರೀ ದೇಶಿಕೇಂದ್ರ ಮಹಾಸ್ವಾಮೀಜಿ, ಶ್ರೀ ರಾಮಚಂದ್ರ ಗುರೂಜಿ, ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಕಾಯಕಯೋಗಿ ಶಾಂತವೀರ ಮಹಾಸ್ವಾಮೀಜಿ, ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿ ಆಗಮಿಸಲಿದ್ದಾರೆ ಎಂದು ತಿಳಿಸಿದರು. ಸೆಪ್ಟೆಂಬರ್ 2, 3 ಮತ್ತು 4ರಂದು ನ್ಯೂಜೆರ್ಸಿ ನಗರದ ಅಟ್ಲಾಂಟಿಕ್ ಸಿಟಿಯ ಕನ್ವೆನ್ಷನ್ ಸೆಂಟರ್ನಲ್ಲಿ ಅಕ್ಕ ವಿಶ್ವ ಕನ್ನಡ 9ನೆ ಸಮ್ಮೇಳನ ನಡೆಯಲಿದೆ. ಇದರಲ್ಲಿ ಅಕ್ಕ ಸ್ಪಿರಿಚುಯಲ್ ಸಮಿತಿ ವತಿಯಿಂದ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin