9 ಚಿನ್ನದ ಪದಕಗಳನ್ನು ಬಾಚಿಕೊಂಡ ಬೊಲ್ಟ್
ಈ ಸುದ್ದಿಯನ್ನು ಶೇರ್ ಮಾಡಿ
ರಿಯೊಡಿ ಜನೈರೊ,ಆ.20- ಜಮೈಕಾ ಓಟಗಾರ ಉಸೇನ್ ಬೊಲ್ಟ್ ಅವರ ಮಿಂಚಿನ ಓಟಕ್ಕೆ ಇನ್ನೊಂದು ಬಂಗಾರದ ಪದಕ ಸಂದಾಯವಾಗಿದ್ದು , ಹೊಸ ದಾಖಲೆ ಬರೆದಿದ್ದಾರೆ. ರಿಯೊದಲ್ಲಿ ನಿನ್ನೆ ತಡರಾತ್ರಿ ನಡೆದ 4*100 ಮೀಟರ್ ರಿಲೆಯಲ್ಲಿ ಬೋಲ್ಟ್ ಅವರನ್ನು ಒಳಗೊಂಡ ಅಮೆರಿಕ ತಂಡ ವಿಕ್ರಮ ಸಾಧಿಸಿತು. ಅಮೆರಿಕ 37.27 ಸೆಕೆಂಡ್ಗಳಲ್ಲಿ ಮೊದಲಾಗಿ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು. 0.33 ಸೆಕೆಂಡ್ಗಳ ಅಂತರದಲ್ಲಿ ಜಪಾನ್ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬೀಜಿಂಗ್ನಿಂದ ರಿಯೊ ಒಲಿಂಪಿಕ್ ತನಕ ನಿರಂತರವಾಗಿ 100, 200 ಮತ್ತು 4*100 ಮೀಟರ್ ಓಟದಲ್ಲಿ ಸ್ವರ್ಣ ಗೆದ್ದ ಅದ್ವಿತೀಯ ಸ್ಪ್ರಿಂಟರ್ ಎಂಬ ದಾಖಲೆಗೆ ಬೋಲ್ಟ್ ಪಾತ್ರರಾಗಿದ್ದಾರೆ. ಈವರೆಗೆ ಒಟ್ಟು 9 ಚಿನ್ನದ ಪದಕಗಳನ್ನು ಗೆದ್ದಿರುವ ಬೋಲ್ಟ್ ವೃತ್ತಿ ಬದುಕಿಗೆ ವಿದಾಯ ಹೇಳಲು ಮುಂದಾಗಿದ್ದಾರೆ.
► Follow us on – Facebook / Twitter / Google+
Facebook Comments