ಸಂಪ್‍ನಲ್ಲಿ ಮುಳುಗಿಸಿ 9 ವರ್ಷದ ಬಾಲಕನ ಕೊಲೆ..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ,ಜೂ.11- ದುಷ್ಕರ್ಮಿಗಳು 9 ವರ್ಷದ ಬಾಲಕನ ಕೈಕಾಲು ಕಟ್ಟಿ ನಿರ್ಮಾಣ ಹಂತದ ಕಟ್ಟದಲ್ಲಿನ ಸಂಪ್‍ನೊಳಗೆ ಹಾಕಿ ಕೊಲೆ ಮಾಡಿರುವ ದಾರುಣ ಘಟನೆ ಹೊಳೆನರಸೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೊಳೆನರಸೀಪುರ ಪಟ್ಟಣದ ಆಶ್ರಯನಗರದ ಪುಟ್ಟಚಾರಿ ಎಂಬುವರ ಪುತ್ರ ಕಾರ್ತಿಕ್(9) ಕೊಲೆಯಾದ ದುರ್ದೈವಿ. ಗ್ರೀನ್‍ವುಡ್ ಶಾಲೆಯಲ್ಲಿ ಮೂರನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕಾರ್ತಿಕ್ ನಿನ್ನೆ ಎಂದಿನಂತೆ ಶಾಲೆ ಮುಗಿಸಿಕೊಂಡು ಬಂದು ಮನೆ ಮುಂದೆ ಆಟವಾಡುತ್ತಿದ್ದನು.

ಸಂಜೆ 7 ಗಂಟೆಯಾದರೂ ಮನೆಗೆ ಹೋಗಿರಲಿಲ್ಲ. ಮನೆಯವರು ಎಲ್ಲಾ ಕಡೆ ಹುಡುಕಾಡಿದರಾದರೂ ಈತನ ಸುಳಿವು ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಕಟ್ಟಡದ ಕಾರ್ಮಿಕರು ಗಾರೆ ಕೆಲಸಕ್ಕೆ ಬಂದ ಸಮಯದಲ್ಲಿ ಸಂಪ್‍ನಲ್ಲಿ ತೇಲತ್ತಿದ್ದ ಬಾಲಕನ ಮೃತದೇಹ ಕಂಡು ಗಾಬರಿಯಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳಕ್ಕಾಮಿಸಿದ ಪೊಲೀಸರು ಸಂಪಿನಿಂದ ಶವವನ್ನು ಹೊರತೆಗೆಸಿ ಪರಿಶೀಲನೆ ನಡೆಸಿದಾಗ ಈ ಬಾಲಕನ ಕೈಕಾಲು, ಕುತ್ತಿಗೆ ಹಗ್ಗದಿಂದ ಸುತ್ತಿರುವುದು ಕಂಡುಬಂದಿದೆ.

ದುಷ್ಕರ್ಮಿಗಳು ಈ ಬಾಲಕನ ಕೈಕಾಲು ಕಟ್ಟಿ ಸಂಪ್‍ನಲ್ಲಿ ಮುಳುಗಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin