9 ವರ್ಷದ ಬಾಲಕಿಗೆ ಕೊರೊನಾ ದೃಢ

ಈ ಸುದ್ದಿಯನ್ನು ಶೇರ್ ಮಾಡಿ

ಕೋಲಾರ, ಆ.11- ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲ ಸಮೀಪದ ನರಸನಹಳ್ಳಿ ಗ್ರಾಮದಲ್ಲಿ ಸಿಂಧು (9) ಎಂಬ ಬಾಲಕಿಗೆ ಕೊರೊನಾ ಸೋಂಕು ತಗುಲಿದ್ದು, ಎಸ್‍ಎನ್‍ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕೊರೊನಾ ಪರೀಕ್ಷೆಗೆ ಒಳಪಟ್ಟಾಗ ಸೋಂಕು ತಗುಲಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ತಕ್ಷಣ ಬಾಲಕಿಯನ್ನು ಎಸ್‍ಎನ್‍ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಾಲಕಿಯ ಪೋಷಕರಿಗೆ ಸೋಂಕು ಬಂದಿಲ್ಲ. ಆದರೆ, ಈ ಬಾಲಕಿಗೆ ಹೇಗೆ ತಗುಲಿತು ಎಂಬುದು ನಿಗೂಢ.

ಈ ಬಗ್ಗೆ ಮಕ್ಕಳ ತಜ್ಞ ಡಾ.ಬಾಲಸುಂದರ್ ಅವರು ಪ್ರತಿಕ್ರಿಯಿಸಿ ಬಾಲಕಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನೆರಡು ಮೂರು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಮಾಡಲಾಗುತ್ತದೆ. ಆತಂಕ ಬೇಡ ಎಂದು ದೃಢಪಡಿಸಿದರು.

Facebook Comments