90 ಕೋಟಿ ರೂ.ಗಳಿಗೆ ಏರಿದ ಶಾರುಖ್ ಸಂಭಾವನೆ

ಈ ಸುದ್ದಿಯನ್ನು ಶೇರ್ ಮಾಡಿ

sharukhan

ಬಾಲಿವುಡ್ ಬಾದ್‍ಶಾ ಶಾರುಖ್ ಖಾನ್ ಸಂಭಾವನೆ 90 ಕೋಟಿ ರೂ.ಗಳಿಗೆ ಏರಿದೆಯಾ ? ಇಂಥದ್ದೊಂದು ಸುದ್ದಿ ಬಿ ಟೌನ್‍ನಿಂದ ಬಂದಿದೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದಲ್ಲಿ ನಟಿಸಲು ಎಸ್‍ಆರ್‍ಕೆ 90 ಕೋಟಿ ರೂ. ಡಿಮ್ಯಾಂಡ್ ಮಾಡಿದನಂತೆ. ಪದ್ಮಾವತಿಯ ಪತ್ನಿ ರಾಜ ರಾವಲ್ ರತನ್ ಸಿಂಗ್ ಪಾತ್ರದಲ್ಲಿ ನಟಿಸಲು ಕೆಲವು ವಾರಗಳ ಹಿಂದೆ ಖಾನ್‍ನನ್ನು ಸಂಪರ್ಕಿಸಿದಾಗ ಆತ ಈ ಮೊತ್ತದ ಸಂಭಾವನೆ ನೀಡಿದರೆ ನಟಿಸುವುದಾಗಿ ಹೇಳಿದ.

ಸಾಮಾನ್ಯವಾಗಿ 40 ಕೋಟಿ ರೂ. ಸಂಭಾವನೆ ಪಡೆಯುವ ಎಸ್‍ಆರ್‍ಕೆ ತನ್ನ ರೆಮ್ಯೂನರೇಷನ್‍ನನ್ನು ಎರಡುಪಟ್ಟು ಹೆಚ್ಚು ಮಾಡಿದ್ದರಿಂದ ನಿರ್ಮಾಪಕರು ಸುಸ್ತಾಗಿ ಆ ಪಾತ್ರಕ್ಕೆ ರಣವೀರ್ ಸಿಂಗ್‍ನನ್ನು ಅಂತಿಮವಾಗಿ ಆಯ್ಕೆ ಮಾಡಿದರು. ಹಲವಾರು ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಾಗಿರುವ ಶಾರುಖ್, ತನಗೆ ಬಂದ ಆಫರ್‍ನನ್ನು ನಿರಾಕರಿಸುವ ಉದ್ದೇಶದಿಂದಲೇ ಸಂಭಾವನೆಯನ್ನು ಡಬಲ್ ಮಾಡಿದ್ದಾನೆ ಎಂದು ಬಾಲಿವುಡ್ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್-20 ನಟರ ಸಾಲಿನಲ್ಲಿ ಶಾರುಖ್ ಖಾನ್ ಸೇರ್ಪಡೆಯಾಗಿರುವುದು ಆತನ ಉತ್ತುಂಗದ ಸಾಧನೆಗೆ ಸಾಕ್ಷಿಯಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin