ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲ ಮಹಿಳೆ
ಈ ಸುದ್ದಿಯನ್ನು ಶೇರ್ ಮಾಡಿ
ಲಂಡನ್,ಡಿ.8-ಉತ್ತರ ಐರ್ಲೇಂಡ್ನ 90 ವರ್ಷದ ವೃದ್ದೆ ಕೊರೊನಾ ಲಸಿಕೆ ಪಡೆದ ವಿಶ್ವದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಇಂಗ್ಲೇಂಡ್ನ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮದ ಅಂಗವಾಗಿ 90 ವರ್ಷದ ವೃದ್ದೆಗೆ ಫೀಜರ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಲಸಿಕೆ ನೀಡಲಾಗಿದೆ.
ಎನ್ನಿಸ್ಕಿಲನ್ ಪ್ರಾಂತ್ಯದ ಮಾರ್ಗರೇಟ್ ಕೆನ್ನನ್ ಅವರಿಗೆ ಕಾವೇಂಟ್ರಿಯಲ್ಲಿರುವ ಆಸ್ಪತ್ರೆಯಲ್ಲಿ ಲಸಿಕೆ ನೀಡಲಾಗಿದೆ ಎಂದು ಬಿಬಿಸಿ ವರದಿ ಮಾಡಿದೆ. ಫೈಜರ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲಸಿಕೆ ಪ್ರಯೋಗಕ್ಕೆ ಕಳೆದ ವಾರವಷ್ಟೇ ಯುಕೆ ಸರ್ಕಾರ ಅನುಮತಿ ನೀಡಿತ್ತು.
Facebook Comments