9/11ರ ಡಬ್ಲ್ಯುಟಿಸಿ ಮೇಲಿಂದ ಭಯಾನಕ ದಾಳಿಗೆ 15 ವರ್ಷ

ಈ ಸುದ್ದಿಯನ್ನು ಶೇರ್ ಮಾಡಿ

911-attack

ನ್ಯೂಯಾರ್ಕ್. ಸೆ.11-ಸುಮಾರು 3,000 ಜನರನ್ನು ಬಲಿ ತೆಗೆದುಕೊಂಡ ಅಮೆರಿಕದ ವಿಶ್ವ ವಾಣಿಜ್ಯ ಕೇಂದ್ರದ (ಡಬ್ಲ್ಯುಟಿಸಿ) ಮೇಲೆ ನಡೆದ ಭೀಕರ ಉಗ್ರ ದಾಳಿಗೆ ಇಂದಿಗೆ 15 ವರ್ಷ. ಘಟನೆ ನಡೆದು ಒಂದೂವರೆ ದಶಕವೇ ಕಳೆದರೂ ಅಮೆರಿಕದಂತಹ ಅಮೆರಿಕವೇ ಇನ್ನೂ ಕೂಡ ಈ ದಾಳಿಯ ಭೀಕರತೆಯಿಂದ ಹೊರಬರಲು ಸಾಧ್ಯವಾಗಿಲ್ಲ.   ಇಂದಿಗೆ ಸರಿಯಾಗಿ 15 ವರ್ಷಗಳ ಹಿಂದೆ ಅಂದರೆ ಸೆ.11, 2001ರಂದು ಅಲ್ ಖೈದಾ ಭಯೋತ್ಪಾದಕರು ಎರಡು ವಿಮಾನಗಳನ್ನು ಅಪಹರಿಸಿ ಗಗನಚುಂಬಿ ಅವಳಿ ಗೋಪುರಗಳ ಮೇಲೆ ಭಯಾನಕ ದಾಳಿ ನಡೆಸಿದರು. ಇಡಿ ಜಗತ್ತಿನ ವಾಣಿಜ್ಯ-ವ್ಯವಹಾರದ ಕೇಂದ್ರ ಬಿಂದುವಿನಂತಿದ್ದ ಡಬ್ಲ್ಯುಟಿಸಿ ಕಟ್ಟಡಗಳು ತರಗೆಲೆಯಂತೆ ನೆಲಕ್ಕುರುಳಿದವು. ಅತ್ಯಂತ ಶಕ್ತಿಶಾಲಿ ದೇಶ ಅಮೆರಿಕದ ಮೇಲೆ ನಡೆದ ಭಯೋತ್ಪಾದಕರ ಘೋರ ಕೃತ್ಯದಿಂದ ಇಡೀ ಜಗತ್ತೇ ದಿಗ್ಭ್ರಮೆಗೊಂಡಿತು.

ಇಂದು ನ್ಯೂಯಾರ್ಕ್, ವಾಷಿಂಗ್ಟನ್ ಸೇರಿದಂತೆ ಅಮೆರಿಕದ ಎಲ್ಲೆಡೆ ಈ ಕರಾಳ ನೆನಪಿನ ದಿನವನ್ನು ಆಚರಿಸಲಾಗುತ್ತಿದೆ. ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟವರ ಗೌರವಾರ್ಥ ಶ್ರದ್ಧಾಂಜಲಿ ಕಾರ್ಯಕ್ರಮಗಳು ನಡೆಯುತ್ತಿವೆ. ನ್ಯಾಷನಲ್ ಸೆಪ್ಟೆಂಬರ್ 11 ಮೊಮೆರಿಯಲ್ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಾಗವಹಿಸಿದರು.

► Follow us on –  Facebook / Twitter  / Google+

Facebook Comments

Sri Raghav

Admin