ಬಿಗ್ ಬ್ರೇಕಿಂಗ್ : ಕರ್ನಾಟಕದಲ್ಲಿ ಕೊರೋನಾ ಸಾರ್ವಕಾಲಿಕ ದಾಖಲೆ, ಇಂದು 918 ಮಂದಿಗೆ ಪಾಸಿಟಿವ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ರಾಜ್ಯದಲ್ಲಿ ಶನಿವಾರ ಅಕ್ಷರಶಃ ಕೊರೋನಾ ಅರ್ಭಟಿಸಿದ್ದು, ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿ ಒಂದೇ ದಿನ ಬರೋಬ್ಬರಿ 918 ಪ್ರಕರಣಗಳು ಪತ್ತೆಯಾಗಿವೆ.

ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,923ಕ್ಕೇರಿಕೆಯಾಗಿದೆ.
ರಾಜ್ಯದಲ್ಲಿ ಕೊರೋನಾ ಅಧಿಕೃತವಾಗಿ ಪ್ರವೇಶವಾದ ನಂತರ ಅತಿ ಹೆಚ್ಚು ದೃಡಪಟ್ಟ ಸೋಂಕಿತ ಪ್ರಕರಣ ಇಂದಿನ ದಿನದ್ದಾಗಿದೆ.

ಶನಿವಾರ ಒಂದೇ ದಿನ ದಾಖಲೆಯ 918 ಕೊರೋನಾ ಕೇಸು ಪತ್ತೆಯಾಗಿದ್ದು ಭಾರೀ ಆತಂಕ ತಂದೊಡ್ಡಿದೆ. ಆದರೆ, ಇಷ್ಟು ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ರೆ, ಕೇವಲ ಏಳು ಮಂದಿ ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ಕೊರೋನಾ ನಿಯಂತ್ರಣಕ್ಕೆ ಸರಕಾರ ಕೆಲವು ಕಠಿಣ ಕ್ರಮಗಳನ್ನು ಘೋಷಿಸಿದುವ ಬೆನ್ನಲ್ಲಿಯೇ ಬೆಂಗಳೂರು ನಗರದಲ್ಲಿಯೇ 596 ಮಂದಿಗೆ ಕೊರೋನಾ ಸೋಂಕು ಇರುವುದು ಬೆಳಕಿಗೆ ಬಂದಿದೆ.

ಇದೇ ವೇಳೆ ಶನಿವಾರ 371 ಮಂದಿ ಸೋಂಕಿನಿಂದ ಗುಣಮುಖರಾದರೇ, 11 ಮಂದಿ ಕೊರೋನಾ ಮಾರಿಗೆಅಸುನೀಗಿದ್ದಾರೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ,ಬೆಂಗಳೂರು ನಗರ 596, ದಕ್ಷಿಣ ಕನ್ನಡ 49, ಕಲಬುರಗಿ 33, ಬಳ್ಳಾರಿ 24, ಗದಗ 24, ಧಾರವಾಡ 19, ಬೀದರ್ 17, ಉಡುಪಿ 14, ಹಾಸನ 14, ಕೋಲಾರ 14,

ಯಾದಗಿರಿ 13, ಶಿವಮೊಗ್ಗ 13, ತುಮಕೂರು 13, ಚಾಮರಾಜನಗರ 13, ಮಂಡ್ಯ 12, ಮೈಸೂರು 12, ಕೊಡಗು 9, ರಾಯಚೂರು 6, ದಾವಣಗೆರೆ 6, ಬೆಂಗಳೂರು ಗ್ರಾಮಾಂತರ 5, ಉತ್ತರ ಕನ್ನಡ 2, ಬಾಗಲಕೋಟೆ, 2, ಚಿಕ್ಕಮಗಳೂಉರ 2, ಚಿತ್ರದುರ್ಗ 2, ಬೆಳಗಾವಿ, ಚಿಕ್ಕಬಳ್ಳಾಪುರ, ಕೊಪ್ಪಳ, ಹಾವೇರಿ ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,531ಕ್ಕೇರಿಕೆಯಾಗಿದೆ. ಇವುಗಳ ಪೈಕಿ 1,913 ಸಕ್ರಿಯ ಪ್ರಕರಣಗಳಿದ್ದು, 533 ಮಂದಿಗೆ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರಿನಲ್ಲಿ 84 ಮಂದಿಗೆ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ. ಇಂದು ಕೇವಲ ಏಳು ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಒಟ್ಟು 4,441 ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ 7,287 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Facebook Comments

Sri Raghav

Admin